ಬಾಲಿವುಡ್ ನ ಹೆಸರಾಂತ ನಟ ಶಾಹಿದ್ ಕಪೂರ್ ಗೆ ಹುಟ್ಟುಹಬ್ಬದ ಸಂಭ್ರಮ. 41ನೇ ವಂಸತಕ್ಕೆ ಬಾಲಿವುಡ್ ಕಬೀರ್ ಸಿಂಗ್ ಕಾಲಿಟ್ಟಿದ್ದಾರೆ
ಬಾಲಿವುಡ್ ನಟನಾದ್ರೂ ಕೂಡ ಸಾಮಾನ್ಯವಾಗಿ ಎಲ್ಲಾ ಸಿನಿಮಾ ಇಂಡಸ್ಟ್ರೀ ಸೇರಿದಂತೆ ಸಾಮಾನ್ಯ ಜನರಿಗೂ ಕೂಡ ಚಿರಪರಿಚಿತ. ತನ್ನ ಚಿಕ್ಕ ವಯಸ್ಸಿನಲ್ಲೇ ಫಿಲ್ಮಫೇರ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಯಂಗ್ ಸ್ಟಾರ್.
ತೆಲುಗಿನ ‘ಅರ್ಜುನ್ ರೆಡ್ಡಿ’ ಚಿತ್ರವನ್ನು ‘ಕಬೀರ್ ಸಿಂಗ್’ ಆಗಿ ಹಿಂದಿಗೆ ರಿಮೇಕ್ ಮಾಡಲಾಗಿತ್ತು. ಇದು ಶಾಹಿದ್ ಕಪೂರ್ಗೆ ದೊಡ್ಡ ಮಟ್ಟದಲ್ಲಿ ಹಿಟ್ ನೀಡಿತ್ತು. ಆ ಬಳಿಕ ನಾನಿ ನಟನೆಯ ‘ಜೆರ್ಸಿ’ ಚಿತ್ರದ ರಿಮೇಕ್ನಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ.
1990 ರಲ್ಲಿ ತೆರೆಕಂಡ ಕೆಲವು ಚಿತ್ರಗಳ ನೃತ್ಯದಲ್ಲಿ ಕಾಣಿಸಿಕೊಂಡ ಶಾಹಿದ್ ಸಿನಿಮಾ ಎನ್ನುವ ಮುಖ್ಯ ವೇದಿಕೆಯನ್ನು ಪ್ರವೇಶಿಸಿದ್ದು, 2003 ರ `ಇಶ್ಖ ವಿಶ್ಖ‘ ಚಿತ್ರದ ಮೂಲಕ.
ಚಿತ್ರಗಳಲ್ಲಿ ಮಾತ್ರವಲ್ಲದೇ ಶಾಹಿದ್ ಕಿಟ್‌ಕ್ಯಾಟ್, ಕ್ಲೋಸ್ ಅಪ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವುದು ಮಾತ್ರವಲ್ಲದೇ ಖಾಸಗಿ ವಾಹಿನಿಯೊಂದರ ಡಾನ್ಸ್ ಕಾರ್ಯಕ್ರಮದಲ್ಲೂ ಕೂಡ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಶಾಹಿದ್ ಕಪೂರ್ 1981 ರ ಫೆಬ್ರವರಿ 25 ರಂದು ಖ್ಯಾತ ನಟರಾದ ಪಂಕಜ್ ಕಪೂರ್ ಮತ್ತು ನೀಲಿಮಾ ಅಝೀಮ್ ದಂಪತಿಗಳ ಹೆಮ್ಮೆಯ ಮಗನಾಗಿ ನವದೆಹಲಿಯಲ್ಲಿ ಜನಿಸಿದರು. ಶಿಕ್ಷಣವನ್ನು ಮುಗಿಸುತ್ತಿದ್ದಂತೆ ಸಿನಿಮಾದ ಕಡೆ ಗಮನ ಹರಿಸಿದ ಶಾಹಿದ್ ಒಂದರ ಮೇಲೊಂದು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು