ಮನೆ ಸುದ್ದಿ ಜಾಲ ಗ್ರಾಹಕ ಕಾಯ್ದೆಯ ಮುಖ್ಯ ಉದ್ದೇಶ ಗ್ರಾಹಕರ ರಕ್ಷಣೆಯಾಗಿದೆ: ಬಿ ನಾರಾಯಣಪ್ಪ

ಗ್ರಾಹಕ ಕಾಯ್ದೆಯ ಮುಖ್ಯ ಉದ್ದೇಶ ಗ್ರಾಹಕರ ರಕ್ಷಣೆಯಾಗಿದೆ: ಬಿ ನಾರಾಯಣಪ್ಪ

0

ಮೈಸೂರು(Mysuru): ಗ್ರಾಹಕರಿಗೆ ಸರಿಯಾದ ಮಾಹಿತಿಯನ್ನು ನೀಡುವುದನ್ನು ವ್ಯಾಪಾರಸ್ಥರು ಹಾಗೂ ತಯಾರಕರು ಪಾಲಿಸಬೇಕು. ಗ್ರಾಹಕರ ಹಕ್ಕುಗಳ ರಕ್ಷಣೆಯೇ ಗ್ರಾಹಕ ಕಾಯ್ದೆಯ ಮುಖ್ಯ ಉದ್ದೇಶ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಬಿ ನಾರಾಯಣ್ಣಪ್ಪ ತಿಳಿಸಿದರು.


ಮೈಸೂರು ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯ ಎಂ.ಬಿ.ಎ ವಿಭಾಗದ ಸಹಯೋಗದೊಂದಿದೆ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯ ಎಂ.ಬಿ.ಎ ವಿಭಾಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರಿಗೆ ಆಗುತ್ತಿದ್ದ ಅನ್ಯಾಯಗಳನ್ನು ತಡೆಯುವ ಸಲುವಾಗಿ ಗ್ರಾಹಕ ಸಂರಕ್ಷಣಾ ದಿನವನ್ನು 1968 ರ ಡಿಸೆಂಬರ್ 24 ರಲ್ಲಿ ಜಾರಿಗೆ ತರಲಾಯಿತು. ಗ್ರಾಹಕರಿಗೆ ವ್ಯಾಪಾರಿಗಳಿಂದ ಯಾವುದೇ ರೀತಿಯ ಸಮಸ್ಯೆ ಉಂಟಾದಲ್ಲಿ ನೇರವಾಗಿ ಗ್ರಾಹಕ ಇಲಾಖೆಯನ್ನು ಸಂಪರ್ಕಿಸಿ. ತಪ್ಪು ಜಾಹಿರಾತುಗಳನ್ನು ನೀಡಿ ಗ್ರಾಹಕರಿಗೆ ವಂಚನೆ ಮಾಡುವ ವ್ಯಾಪಾರಸ್ಥರಿಗೆ ಗ್ರಾಹಕ ಕಾಯ್ದೆಯ ಮೂಲಕ ದೂರು ದಾಖಲಿಸಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಹಕ ಕಾಯ್ದೆಯ ತಿದ್ದುಪಡಿಯ ಮೂಲಕ ಹಲವಾರು ಉಪಯೋಗಗಳನ್ನು ಪಡೆಯಬಹುದಾಗಿದ್ದು, ಆನ್‌ಲೈನ್ ಮೂಲಕ ಗ್ರಾಹಕರಿಗೆ ಮೋಸ ಮಾಡುವಂತಹ ಸಂಸ್ಥೆಗಳ ಮೇಲೆ ಇಲಾಖೆಗೆ ದೂರುಗಳನ್ನು ಸಲ್ಲಿಸಿ ನ್ಯಾಯವನ್ನು ಪಡೆದುಕೊಳ್ಳಬಹುದು.
ಖಾಸಗಿ ವಲಯಗಳಲ್ಲಿ ಸಮಸ್ಯೆ, ನೀರು ಸರಬರಾಜು, ವಿದ್ಯುತ್ ಸರಬರಾಜು ಮತ್ತು ಅನುಚಿತ ವ್ಯಾಪಾರ ಪದ್ಧತಿಗಳಲ್ಲಿ ಸಮಸ್ಯೆ ಉಂಟಾದಲ್ಲಿ ದೂರು ದಾಖಲಿಸಿ ಪರಿಹಾರ ಪಡೆಯಬಹುದು.
ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗ್ರಾಹಕ ಹಕ್ಕುಗಳ ಇಲಾಖೆಯು ಗ್ರಾಹಕ ಸೇವೆಗೆಂದು ಕಾರ್ಯ ನಿರ್ವಹಿಸುತ್ತದೆ. ಆರೋಗ್ಯ ವಿಮೆ, ಜೀವ ವಿಮೆ, ಕೆ.ಎಸ್.ಆರ್.ಟಿ.ಸಿ, ರೈಲ್ವೆ, ಹಾಗೂ ಸರ್ಕಾರಿ ಸಂಬAಧಿತ ಯಾವುದೇ ವಿಚಾರದಲ್ಲಿ ಗ್ರಾಹಕರಿಗೆ ಸಮಸ್ಯೆ ಉಂಟಾದಲ್ಲಿ ಆಯೋಗಕ್ಕೆ ದೂರು ಸಲ್ಲಿಸಿ ಗ್ರಾಹಕರು ಪರಿಹಾರವನ್ನು ಪಡೆಯಬಹುದು. 2019 ರ ಗ್ರಾಹಕ ರಕ್ಷಣಾ ಕಾಯ್ದೆಯ ತಿದ್ದುಪಡಿ ಅನ್ವಯ ವಸ್ತುಗಳ ಉತ್ಪನ, ಗುಣಮಟ್ಟದ ಅಂಶಗಳು ಮತ್ತು ವಸ್ತುಗಳ ತಯಾರಿಕೆಯಲ್ಲಿ ಬಳಸಿರುವ ಅಂಶಗಳ ಸಂಪೂರ್ಣ ಮಾಹಿತಿಯನ್ನು ಪದಾರ್ಥಗಳ ಮೇಲೆ ನಮೂದಿಸಿರಬೇಕು ಎಂದು ಮಾಹಿತಿ ನೀಡಿದರು.
 ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ದೇವರಾಜ ಭೂತೆ ಅವರು ಮಾತನಾಡಿ, Right to Safety, Right to Informed, Right to Choice  ಕುರಿತು ತಿಳಿಸಿದರು.
ಗ್ರಾಹಕರ ಹಕ್ಕು, ಕರ್ತವ್ಯ, ಶಿಕ್ಷಣ, ಜಾಗೃತಿ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಲು ಏರ್ಪಡಿಸಿದ್ದ ಗ್ರಾಹಕ ಜಾಗೃತಿ ವಸ್ತು ಪ್ರದರ್ಶನಕ್ಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುಂಡಪ್ಪ ಗೌಡ ಅವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರದ ಎಂ.ಕೆ.ಲಲಿತ, ಸದಸ್ಯರದ ಮಾರುತಿ ಹೆಚ್.ವಡ್ಡರ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಕುಮುದ ಶರತ್, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ ವಿಶ್ವನಾಥ್, ಸಂಸ್ಥೆಯ ಪ್ರಾಂಶುಪಾಲರು, ಬೋಧಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದರು.