ಮನೆ ಅಂತಾರಾಷ್ಟ್ರೀಯ ಉಗ್ರರ ಆತ್ಮಾಹುತಿ ಬಾಂಬ್ ದಾಳಿ: 19 ಜನರ ಸಾವು

ಉಗ್ರರ ಆತ್ಮಾಹುತಿ ಬಾಂಬ್ ದಾಳಿ: 19 ಜನರ ಸಾವು

0

ಮೊಗದಿಶು: ಸೊಮಾಲಿಯಾದ ಮಧ್ಯ ಹಿರಾನ್ನ ಮಹಾಸ್ ನಗರದಲ್ಲಿ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ, ಸ್ಫೋಟಕಗಳನ್ನು ತುಂಬಿದ್ದ ವಾಹನಗಳೊಂದಿಗೆ ಉಗ್ರರು ದಾಳಿ ನಡೆಸಿದ್ದಾರೆ. ಅವಳಿ ಕಾರ್ ಬಾಂಬ್ ಸ್ಫೋಟಕ್ಕೆ 19 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಅಲ್-ಶಬಾಬ್ ಉಗ್ರ ಸಂಘಟನೆಯ ವಿರುದ್ಧ ಸೇನೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಅಸುನೀಗಿದ 19 ಮಂದಿಯಲ್ಲಿ ಸೈನಿಕರು, ಪತ್ರಕರ್ತರು ಹಾಗೂ ಸ್ಥಳೀಯರು ಸೇರಿದ್ದಾರೆ.

ದಾಳಿಯಿಂದ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.