ಮನೆ ಮನರಂಜನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಂಹಪ್ರಿಯಾ ಜೋಡಿಗೆ ʼಯದಾ ಯದಾ ಹಿʼ ಮೋಷನ್ ಪೋಸ್ಟರ್ ಉಡುಗೊರೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಂಹಪ್ರಿಯಾ ಜೋಡಿಗೆ ʼಯದಾ ಯದಾ ಹಿʼ ಮೋಷನ್ ಪೋಸ್ಟರ್ ಉಡುಗೊರೆ

0

ಬೆಂಗಳೂರು(Bengaluru): ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಸಿಷ್ಠಸಿಂಹ, ಹರಿಪ್ರಿಯ ಜೋಡಿಗೆ ಮದುವೆ ಗಿಫ್ಟ್ ಆಗಿ ‘ಯದಾ ಯದಾ ಹಿ’ ಚಿತ್ರದ ವಿಶೇಷ ಮೋಷನ್ ಪೋಸ್ಟರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ವಸಿಷ್ಠಸಿಂಹ, ಹರಿಪ್ರಿಯ ಹಾಗೂ ದಿಗಂತ್ ಮಂಚಾಲೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರವು ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗಿದೆ.

ತೆಲುಗಿನ ʼಎವುರುʼ ಚಿತ್ರದ ರೀಮೇಕ್ ಇದಾಗಿದ್ದು, ತೆಲುಗಿನಲ್ಲಿ 2 ಚಿತ್ರ ನಿರ್ದೇಶಿಸಿರುವ ಅಶೋಕ್ ತೇಜ  ಈ ಸಿನಿಮಾ  ಮೂಲಕ ನಿರ್ದೇಶಕರಾಗಿ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಹರಿಪ್ರಿಯಾ, ದಿಗಂತ್ ಹಾಗೂ ವಸಿಷ್ಠಸಿಂಹ ಮೂರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಒಂದು ಮರ್ಡರ್ ಮಿಸ್ಟರಿ ಸುತ್ತ ನಡೆಯುವ ತನಿಖೆಯನ್ನು ರೋಚಕವಾಗಿ ಹೇಳಲಾಗಿದೆ.

ತೆಲುಗಿನಲ್ಲಿ ನಟಿ ರೆಜಿನಾ ನಿರ್ವಹಿಸಿದ್ದ  ಪಾತ್ರವನ್ನು ಹರಿಪ್ರಿಯಾ ಹಾಗೂ ಅದ್ವಿಶೇಷ್ ಪಾತ್ರವನ್ನು ದಿಗಂತ್ ಮಾಡಿದ್ದಾರೆ. ಈ ಚಿತ್ರಕ್ಕೆ ರೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದ್ರಾಬಾದ್ನ ರಾಜೇಶ್ ಅಗರವಾಲ್  ಬಂಡವಾಳ ಹೂಡಿದ್ದಾರೆ.

ಇಂಗ್ಲೀಷ್ ಭಾಷೆಯಲ್ಲಿ ದಿ ಇನ್ವಿಸಿಬಲ್ ಗೆಸ್ಟ್ ಹೆಸರಿನಲ್ಲಿ  ತಯಾರಾಗಿದ್ದ ಈ ಚಿತ್ರ ಹಿಂದಿ  ಭಾಷೆಯಲ್ಲೂ ನಿರ್ಮಾಣವಾಗಿತ್ತು, ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿ ಆಗಿದೆ.   ಚರಣ್ ಪಕಡ ಅವರ  ಸಂಗೀತ ನಿರ್ದೇಶನ,  ಯೋಗಿ ಅವರ ಕ್ಯಾಮೆರಾವರ್ಕ್, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.