ಮನೆ ರಾಜಕೀಯ ಕಿತ್ತೂರು ಕರ್ನಾಟಕ ಭಾಜಪದ ಭದ್ರಕೋಟೆ: ಸಿಎಂ ಬೊಮ್ಮಾಯಿ

ಕಿತ್ತೂರು ಕರ್ನಾಟಕ ಭಾಜಪದ ಭದ್ರಕೋಟೆ: ಸಿಎಂ ಬೊಮ್ಮಾಯಿ

0

ಹುಬ್ಬಳ್ಳಿ: ಕಿತ್ತೂರು ಕರ್ನಾಟಕ ಭಾಜಪದ ಭದ್ರಕೋಟೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಕಿತ್ತೂರು ಕರ್ನಾಟಕದಲ್ಲಿ ಒಂದು ರೀತಿಯ ಸಂಚಲನವಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಶನಿವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಎಫ್. ಎಸ್.ಎಲ್ ಲ್ಯಾಬ್ ಅಡಿಗಲ್ಲು, ಕೆ.ಎಲ್.ಇ ಸೊಸೈಟಿ ಬಿವಿಬಿ ಕಾಲುಕಿನ 75 ನೇ ವಾರ್ಷಿಕೋತ್ಸವ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಧಾರವಾಡ ಜಿಲ್ಲೆಯ ಬೂತ್ ಮಟ್ಟದ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಂ.ಕೆ ಹೋಬಳಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಮಂಡಲದ ಮೇಲೆ ಇರುವ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದಾರೆ ಎಂದರು.

ಕಳೆದ ಬಾರಿಯ ಚುನಾವಣೆಯಲ್ಲಿ ಅಮಿತ್ ಶಾ ಪ್ರಮುಖ ಪಾತ್ರ ವಹಿಸಿದ್ದರು. ಮಂಡ್ಯಕ್ಕೆ ಬಂದು ಹೋಗಿದ್ದರು, ಈಗ ಕಿತ್ತೂರು ಕರ್ನಾಟಕ , ಮುಂದಿನ ತಿಂಗಳು ಹೈದರಾಬಾದ್ ಕರ್ನಾಟಕ ಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ಕೇಂದ್ರ ಹಾಗೂ ರಾಜ್ಯದ ಯೋಜನೆಗಳ ಪ್ರಗತಿ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ. ರಾಷ್ಟ್ರೀಯ ನಾಯಕರ ಪ್ರಭಾವ ಕರ್ನಾಟಕದ ರಾಜಕಾರಣದಲ್ಲಿ ಆಗುತ್ತಿದೆ. ಪಕ್ಷ ಅದರ ಬಳಕೆ ಮಾಡುತ್ತಿದೆ ಎಂದರು.

ಪಕ್ಷದಲ್ಲಿ ಯಾವ ಭಿನ್ನಮತವೂ ಇಲ್ಲ. ಅಂಥದ್ದು ಎಲ್ಲಿಯೂ ಅಭಿವ್ಯಕ್ತವಾಗಿಲ್ಲ. ಪಕ್ಷದ ಬೆಳವಣಿಗೆ ಮುಖ್ಯ. ಎಲ್ಲರೂ ಅದಕ್ಕೇ ಶ್ರಮಿಸಬೇಕು. ಬೆಳಗಾವಿ, ಧಾರವಾಡ, ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ದಕ್ಷಿಣ ಕರ್ನಾಟಕಕ್ಕೆ ಒಂದು ಗುರಿಯಿದೆ. ಗುರಿ ಸಾಧನೆಗಾಗಿ ಈ ಸಂಘಟನೆ ಮಾಡುತ್ತಿದ್ದೇವೆ ಎಂದರು.