ಮನೆ ರಾಜ್ಯ ವಿಧಾನ ಸಭಾ ಚುನಾವಣೆ: ಫೆ.13 ರಂದು ವಿ.ವಿ.ಪಾಟ್ ಗಳು ಜಿಲ್ಲೆಗೆ ಬರಲಿವೆ – ಡಿ.ಸಿ. ಕೆ.ವಿ.ರಾಜೇಂದ್ರ

ವಿಧಾನ ಸಭಾ ಚುನಾವಣೆ: ಫೆ.13 ರಂದು ವಿ.ವಿ.ಪಾಟ್ ಗಳು ಜಿಲ್ಲೆಗೆ ಬರಲಿವೆ – ಡಿ.ಸಿ. ಕೆ.ವಿ.ರಾಜೇಂದ್ರ

0

ಮೈಸೂರು: ವಿಧಾನ ಸಭೆ ಚುನಾವಣೆ 2023 ರ ಸಿದ್ದತೆಗಳು ಭರದಿಂದ ಸಾಗಿದ್ದು, ಮತದಾನ ಪ್ರಕ್ರಿಯೆ ಭಾಗವಾದ ವಿ.ವಿ.ಪಾಟ್(V.V.PAT) ಗಳು ಫೆ.13 ರಂದು ಜಿಲ್ಲೆಗೆ ಆಗಮಿಸಲಿವೆ ಎಂದು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು ಅಂದು ಹೈದರಾಬಾದ್ ನಿಂದ 9 ಲಾರಿಗಳಲ್ಲಿ ವಿ.ವಿ.ಪಾಟ್ ಗಳನ್ನು  ತರಲಾಗುವುದು.  ಎಲ್ಲಾ ಪಕ್ಷಗಳ ಪ್ರತಿನಿಧಿಗಳು ವಿ.ವಿ.ಪಾಟ್ ಗಳನ್ನು ಪರಿಶೀಲಿಸಬಹುದಾಗಿದೆ.ಹಾಗೂ ತಮಗೆ ಯಾವುದೇ ಸಂದೇಹಗಳಿದ್ದರೆ ಪರಿಹರಿಸಿಕೂಳ್ಳಬಹುದಾಗಿದೆ ಎಂದರು.

ವಿ.ವಿ.ಪಾಟ್ ಗಳನ್ನು ಹೈದರಾಬಾದ್ ನಿಂದ ನಮ್ಮ ಅಧಿಕಾರಿಗಳು ಸ್ವೀಕರಿಸಿದ ಕ್ಷಣದಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರತಿ ಹಂತವನ್ನೂ ನೀವುಗಳು ನೋಡಬಹುದಾಗಿದೆ ಎಂದರು.

ಆನಂತರ ಅಣಕು ಮತದಾನ ನಡೆಸಲಾಗುವುದು. ಒಟ್ಟಾರೆ ಯಾವುದೇ ಸಂದೇಹವಿಲ್ಲದಂತೆ ಚುನಾವಣೆ ನಡೆಸುವುದೇ ನಮ್ಮ  ಉದ್ದೇಶ ಎಂದರು.

ಜಿಲ್ಲೆಯಲ್ಲಿ 2905 ಮತಗಟ್ಟೆಗಳಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸುವ ಹಾಗೂ ತೆಗೆಯುವ ಕಾರ್ಯಗಳಾಗುತಿದ್ದು , ಯಾವುದೇ ಹಂತದಲ್ಲಿ ಬಿ.ಎಲ್.ಓ ಗಳು ಸ್ಪಂದಿಸದಿದ್ದರೆ ದೂರು ನೀಡಿ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.