ಮನೆ ದೇವರ ನಾಮ ದಾಸನ ಮಾಡಿಕೊ ಎನ್ನ

ದಾಸನ ಮಾಡಿಕೊ ಎನ್ನ

0

ದಾಸನ ಮಾಡಿಕೊ ಎನ್ನ ಸ್ವಾಮಿ

ಸಾಸಿರ ನಾಮದ ವೆಂಕಟರಮಣ

ದುರ್ಬುದ್ಧಿಗಳನೆಲ್ಲ ಬಿಡಿಸೊ ನಿನ್ನ

ಕರುಣ-ಕವಚವೆನ್ನ ಹರಣಕೆ ತೊಡಿಸೊ

ಚರಣಸೇವೆ ಎನಗೆ ಕೊಡಿಸೊ ಅಭಯ

ಕರ ಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ||೧||

ದೃಢಭಕ್ತಿ ನಿನ್ನಲ್ಲಿ ಬೇಡಿ ನಾ

ಅಡಿಗೆರಗುವೆನಯ್ಯ ಅನುದಿನ ಪಾಡಿ

ಕಡೆಗಣ್ಣಲೇಕೆನ್ನ ನೋಡಿ ಬಿಡುವೆ

ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ ||೨||

ಮೊರೆಹೊಕ್ಕವರ ಕಾಯುವ ಬಿರುದು ಎನ್ನ

ಮರೆಯದೆ ರಕ್ಷಣೆ ಮಾಡಯ್ಯ ಪೊರೆದು

ದುರಿತಗಳೆಲ್ಲವ ತರಿದು ಸಿರಿ

ಪುರಂದರ ವಿಠಲ ಎನ್ನನು ಪೊರೆದು ||೩||

ರಾಗ: ನಾದನಾಮಕ್ರಿಯ

ತಾಳ: ಆದಿ

ರಚನೆ : ಪುರಂದರ ದಾಸರು

ಹಿಂದಿನ ಲೇಖನವಿಧಾನ ಸಭಾ ಚುನಾವಣೆ: ಫೆ.13 ರಂದು ವಿ.ವಿ.ಪಾಟ್ ಗಳು ಜಿಲ್ಲೆಗೆ ಬರಲಿವೆ – ಡಿ.ಸಿ. ಕೆ.ವಿ.ರಾಜೇಂದ್ರ
ಮುಂದಿನ ಲೇಖನಯೋಗ ಮಾಡುವಾಗ ಈ ಅಂಶಗಳನ್ನು ಅಗತ್ಯವಾಗಿ ಗಮನಿಸಿ, ಇಲ್ಲವಾದರೆ ಅಡ್ಡ ಪರಿಣಾಮ ಕಾಡಬಹುದು