ಮನೆ ರಾಜಕೀಯ ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡವರಲ್ಲಿ ನಾನು ಒಬ್ಬ: ಡಾ.ಜಿ. ಪರಮೇಶ್ವರ

ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡವರಲ್ಲಿ ನಾನು ಒಬ್ಬ: ಡಾ.ಜಿ. ಪರಮೇಶ್ವರ

0

ಮಧುಗಿರಿ: ಕಾಂಗ್ರೆಸ್​’ನಲ್ಲಿ ಬರೋಬ್ಬರಿ ಹತ್ತು ಮಂದಿ ರಾಜ್ಯದ ಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ನಾನೂ ಒಬ್ಬ ಎಂದು ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ. ಪರಮೇಶ್ವರ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಪುರವರ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಬುಧವಾರ ಡಾ.ಜಿ. ಪರಮೇಶ್ವರ ಸಾಧನೆಗಳ ಹೆಜ್ಜೆ ಗುರುತು ಪುಸ್ತಕವನ್ನು ಮನೆಗಳಿಗೆ ತಲುಪಿಸಿ ಅವರು ಮಾತನಾಡಿದರು.

ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ. ಆದರೆ, ಮೊದಲು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕಿದೆ. ಆ ಮೇಲೆ ಹೈಕಮಾಂಡ್ ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದನ್ನು ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.

ರಾಜ್ಯದ ಜನರು ಕಾಂಗ್ರೆಸ್ ಕಡೆಗೆ ಒಲವು ತೋರುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.ರಾಜ್ಯದಲ್ಲಿ 123 ಶಾಸಕ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಜೆಡಿಎಸ್‌’ನ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಾರೆ. ಮೊದಲು 224 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಹಾಕಲಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಸ್ಕ್ರೀನಿಂಗ್ ಕಮಿಟಿಯಲ್ಲಿ ನಾನು ಸಹ ಸದಸ್ಯನಾಗಿದ್ದೇನೆ. ಈ ತಿಂಗಳೊಳಗೆ ಅಂತಿಮ ಪಟ್ಟಿ ಪ್ರಕಟವಾಗಲಿದೆ ಎಂದ ಅವರು, ನಮ್ಮಲ್ಲಿ ಯಾವ ಬಣವೂ ಇಲ್ಲ. ಎಲ್ಲಾ ಕಾಂಗ್ರೆಸ್ ಬಣ ಎಂದರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ₹ 205 ಕೋಟಿ ವೆಚ್ಚದಡಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಈ ಪೈಕಿ ಶಾಲೆ, ಅಂಗನವಾಡಿ ,ಆಸ್ಪತ್ರೆ ,ರಸ್ತೆ ಸಿಸಿ ರಸ್ತೆ ಚರಂಡಿ ದೇಗುಲಗಳು ಒಳಗೊಂಡಿದ್ದು ಕ್ಷೇತ್ರದಲ್ಲಿ ಈವರೆಗೆ ಇಪ್ಪತ್ತು ಸಾವಿರಕ್ಕೂ ಅಧಿಕ ಮನೆಗಳನ್ನು ಕಟ್ಟಲಾಗಿದೆ ಎಂದು ತಿಳಿಸಿದರು.