ಮನೆ ಅಪರಾಧ ವಿವಾಹವಾಗಲು ನಿರಾಕರಿಸಿದ ವಿಚ್ಛೇದಿತ ಮಹಿಳೆಯನ್ನು ಕೊಂದ ಮೆಕ್ಯಾನಿಕ್ ಬಂಧನ

ವಿವಾಹವಾಗಲು ನಿರಾಕರಿಸಿದ ವಿಚ್ಛೇದಿತ ಮಹಿಳೆಯನ್ನು ಕೊಂದ ಮೆಕ್ಯಾನಿಕ್ ಬಂಧನ

0

ಬೆಂಗಳೂರು: ವಿವಾಹವಾಗಲು ನಿರಾಕರಿಸಿದ್ದಕ್ಕೆ ವಿಚ್ಛೇದಿತ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದಿದ್ದ ಮೆಕ್ಯಾನಿಕ್ ಒಬ್ಬನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ನದೀಂ ಪಾಷಾ (37) ಮತ್ತು ಸಂತ್ರಸ್ತೆ ಕೌಸರ್ ಮುಬೀನಾ ಎಂದು ಗುರುತಿಸಲಾಗಿದೆ.

ಮೊದಲು ಆಟೋ ಚಾಲಕನಾಗಿದ್ದ ನದೀಂ ನಂತರ ವಿದೇಶಕ್ಕೆ ಹೋಗಿದ್ದ. ಹಿಂದಿರುಗಿದ ನಂತರ, ಆತ ಮೆಕ್ಯಾನಿಕ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದ್ದ.

2009 ರಲ್ಲಿ ಸಂತ್ರಸ್ತೆ ಮಂಡ್ಯದಲ್ಲಿ ವಸೀಂ ಪಾಷಾ ಎಂಬುವವರನ್ನು ವಿವಾಹವಾಗಿದ್ದರು ಮತ್ತು 11 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು. ನಂತರ ಸಂತ್ರಸ್ತೆ ತನ್ನ ಮಗಳೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿ, ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು.

ಮಂಡ್ಯ ಮೂಲದ ನದೀಂ ಎಂಬಾತ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆಕೆಯನ್ನು ಭೇಟಿಯಾಗಲು ಮಂಡ್ಯದಿಂದ ನಗರಕ್ಕೆ ಬರುತ್ತಿದ್ದ. ಸಂತ್ರಸ್ತೆ ಮತ್ತು ಆಕೆಯ ಸಂಬಂಧಿಕರು ಎರಡನೇ ಮದುವೆಯನ್ನು ಇಷ್ಟಪಡದ ಕಾರಣ, ಅವಳು ಆತನನ್ನು ಮದುವೆಯಾಗಲು ನಿರಾಕರಿಸಿದಳು. ಇದರಿಂದ ಹತಾಶೆಗೊಂಡ ಆತ ಸಂತ್ರಸ್ತೆಯನ್ನು ಕೊಂದಿದ್ದಾನೆ ಎನ್ನಲಾಗಿದೆ.

ಹತ್ಯೆಯಾಗುವ ಮೂರು ದಿನಗಳ ಮೊದಲು ಸಂತ್ರಸ್ತೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಆರೋಪಿ ಆಕೆಗೆ ಬೆಳ್ಳಿಯ ಕಾಲುಂಗುರವನ್ನು ಉಡುಗೊರೆಯಾಗಿ ನೀಡಿದ್ದನು. ಚಿನ್ನದ ಸರ ನೀಡದ ಹಿನ್ನೆಲೆಯಲ್ಲಿ ಆಕೆ ಮನನೊಂದಿದ್ದಳು. ಇದೇ ವಿಚಾರವಾಗಿ ಜಗಳ ನಡೆದಿದ್ದು ಕೊಲೆಗೆ ಒಂದು ಕಾರಣ ಎನ್ನಲಾಗಿದೆ.

ಹಿಂದಿನ ಲೇಖನಶಾಸಕ ಎಂ.ಸತೀಶ್ ರೆಡ್ಡಿ ಕೊಲೆಗೆ ಸಂಚು: ಇಬ್ಬರು ಆರೋಪಿಗಳ ಬಂಧನ
ಮುಂದಿನ ಲೇಖನಮುಖ್ಯಮಂತ್ರಿಯಾಗುವ ಆಸೆ ಇಟ್ಟುಕೊಂಡವರಲ್ಲಿ ನಾನು ಒಬ್ಬ: ಡಾ.ಜಿ. ಪರಮೇಶ್ವರ