ಮನೆ ದೇವರ ನಾಮ ಲಂಬೋದರ ಲಕುಮಿಕರ

ಲಂಬೋದರ ಲಕುಮಿಕರ

0

ರಾಗ: ಮಲಹರಿ ತಾಳ: ರೂಪಕ

ರಚನೆ: ಶ್ರೀ ಪುರಂದರದಾಸರು

ಲಂಬೋದರ ಲಕುಮಿಕರ

ಅಂಬಾಸುತ ಅಮರ ವಿನುತ ||ಪ.||

ಶ್ರೀ ಗಣನಾಥ ಸಿಂಧುರ ವರ್ಣ

ಕರುಣ ಸಾಗರ ಕರಿವದನ ||೧||

ಸಿದ್ಧ ಚಾರಣ ಗಣ ಸೇವಿತ

ಸಿದ್ಧಿ ವಿನಾಯಕ ತೇ ನಮೋ ನಮೋ ||೨||

ಸಕಲ ವಿದ್ಯಾ ಆದಿ ಪೂಜಿತ

ಸರ್ವೋತ್ತಮ ತೇ ನಮೋ ನಮೋ ||೩||