ಮನೆ ಮನರಂಜನೆ ಅಲ್ಲು ಅರ್ಜುನ್ ಜನ್ಮದಿನದಂದು ʼಪುಷ್ಪ-2ʼ ಸಿನಿಮಾದ ಟೀಸರ್ ರಿಲೀಸ್ ನಿರೀಕ್ಷೆ

ಅಲ್ಲು ಅರ್ಜುನ್ ಜನ್ಮದಿನದಂದು ʼಪುಷ್ಪ-2ʼ ಸಿನಿಮಾದ ಟೀಸರ್ ರಿಲೀಸ್ ನಿರೀಕ್ಷೆ

0

ಹೈದರಾಬಾದ್: ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼಪುಷ್ಪ-2ʼ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸಿನಿಮಾ ರಿಲೀಸ್ ಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

ಸುಕುಮಾರ್ ನಿರ್ದೇಶನದ ಬಿಗ್ ಬಜೆಟ್ ಸಿನಿಮಾದಲ್ಲಿ ಮೊದಲ ಭಾಗಕ್ಕಿಂತ ಹೆಚ್ಚು ಆ್ಯಕ್ಷನ್ ಹಾಗೂ ಥ್ರಿಲ್ ಇರಲಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಈ ಹಂತದಲ್ಲೇ ಸಿನಿಮಾ ತಂಡದಿಂದ ಅಪ್ಡೇಟ್ ವೊಂದು ಹೊರ ಬಿದ್ದಿದೆ.

ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬಕ್ಕೆ ಅಂದರೆ ಏಪ್ರಿಲ್  8 ರಂದು ʼಪುಷ್ಪ-2ʼ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ ಎನ್ನುವ ಬಗ್ಗೆ ವರದಿಯಾಗಿದೆ.  ನಾಯಕ ನಟನ ಹುಟ್ಟುಹಬ್ಬದಂದು ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ಚಿತ್ರ ತಂಡ ಮಾಡಿಕೊಂಡಿದೆ ಎನ್ನಲಾಗಿದೆ.

ಸದ್ಯ ಅಲ್ಲು ಅರ್ಜುನ್ ಒಂದು ಹಂತದ ಶೂಟಿಂಗ್ ಮುಗಿಸಿ ರಾಜಸ್ಥಾನದಲ್ಲಿ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

ಅಲ್ಲು ಅರ್ಜುನ್ ಬರ್ತ್ ಡೇ ದಿನ ಟೀಸರ್ ರಿಲೀಸ್ ಆದರೆ ಅಭಿಮಾನಿಗಳ ಪಾಲಿಗೆ ಡಬಲ್ ಖುಷಿ ಸಿಗಲಿದೆ. ಫಾಹದ್ ಫಾಸಿಲ್, ರಶ್ಮಿಕಾ ಮಂದಣ್ಣ ಮುಂತಾದ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.