ಮನೆ ಮನರಂಜನೆ ತೆಲುಗು ಚಿತ್ರದಲ್ಲಿನ ದುನಿಯಾ ವಿಜಯ ಪಾತ್ರ ರಿವೀಲ್ ಮಾಡಿದ ಚಿತ್ರ ತಂಡ

ತೆಲುಗು ಚಿತ್ರದಲ್ಲಿನ ದುನಿಯಾ ವಿಜಯ ಪಾತ್ರ ರಿವೀಲ್ ಮಾಡಿದ ಚಿತ್ರ ತಂಡ

0

ಚಿತ್ರರಂಗದಲ್ಲಿ ದುನಿಯಾ ವಿಜಯ್ ಎರಡನೇ ಇನ್ನಿಂಗ್ಸ್ ಭರ್ಜರಿಯಾಗಿ ಆರಂಭ ಆಗಿದೆ. ‘ಸಲಗ’ ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ನಂತರ ಟಾಲಿವುಡ್ ಕೈ ಬೀಸಿ ಕರೆದಿತ್ತು.

ಬಾಲಕೃಷ್ಣ ನಟಿಸುತ್ತಿರುವ 107ನೇ ಸಿನಿಮಾದಲ್ಲಿ ದುನಿಯಾ ವಿಜಯ್‌ಗೆ ಪವರ್‌ಫುಲ್ ರೋಲ್‌ಗೆ ಆಫರ್ ಬಂದಿತ್ತು.  ಈಗ #NBK107 ಚಿತ್ರತಂಡ ದುನಿಯಾ ಪಾತ್ರವನ್ನು ರಿವೀಲ್ ಮಾಡಿದೆ.

ಟಾಲಿವುಡ್‌ನಲ್ಲಿ ಖಳನಾಯಕನಾಗಿ ಎಂಟ್ರಿಕೊಟ್ಟಿದ್ದೂ ಆಗಿದೆ. ಈಗಾಗಲೇ ದುನಿಯಾ ವಿಜಯ್ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ.

ಈಗಾಗಲೇ ಬಾಲಯ್ಯ ಅಭಿನಯದ 107ನೇ ಸಿನಿಮಾ ಸೆಟ್ಟಿಗೆ ಕಾಲಿಟ್ಟಿದ್ದು, ಚಿತ್ರತಂಡ ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡಿತ್ತು. ಈಗ ದುನಿಯಾ ವಿಜಯ್ ಫಸ್ಟ್ ಲುಕ್ ರಿವೀಲ್ ಮಾಡಿದೆ.

ದುನಿಯಾ ವಿಜಯ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಸಖತ್ತಾಗಿದೆ. ಸಿಗರೇಟ್ ಸೇದುತ್ತಾ ರಗಡ್ ಲುಕ್ ಕೊಟ್ಟಿರುವ ದುನಿಯಾ ವಿಜಯ್ ಫಸ್ಟ್ ಲುಕ್ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ. ಇನ್ನೊಂದು ಕಡೆ ತೆಲುಗು ಚಿತ್ರದಲ್ಲಿ ವಿಜಯ್ ಪಾತ್ರದ ಹೆಸರು ಕೂಡ ಗಮನ ಸೆಳೆಯುತ್ತಿದೆ. ಖಡಕ್ ವಿಲನ್ ಆಗಿದ್ದರೂ, ಪಾತ್ರದ ಹೆಸರು ಟಾಲಿವುಡ್ ಮಂದಿಯನ್ನು ಗಮನ ಸೆಳೆಯುತ್ತಿದೆ. ಮುಸಲಿ ಮಡುಗು ಪ್ರತಾಪ್ ರೆಡ್ಡಿ ಪಾತ್ರದಲ್ಲಿ ವಿಜಯ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಹೆಸರು ಈಗ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.