ಮನೆ ಭಾವನಾತ್ಮಕ ಲೇಖನ ಕಾಡುವ ಅಪರಾಧಿಭಾವದಿಂದ ವ್ಯಕ್ತಿತ್ವವೇ ಬದಲಾಗಬಹುದು

ಕಾಡುವ ಅಪರಾಧಿಭಾವದಿಂದ ವ್ಯಕ್ತಿತ್ವವೇ ಬದಲಾಗಬಹುದು

0

ಮಾಡಿದ ಪಾಪಕರ್ಮಗಳನ್ನು ನೆನೆಸಿಕೊಂಡು ಪಶ್ಚಾತ್ತಾಪ ಪಡುವುದರಿಂದ ಮನುಷ್ಯ ಮತ್ತೆ ಮರುಹುಟ್ಟು ಪಡೆದುಕೊಳ್ಳುತ್ತಾನೆ. ದೇವರು ಆತನನ್ನು ಮೆಚ್ಚಿಕೊಳ್ಳುತ್ತಾನೆ ಎನ್ನುತ್ತವೆ ಧರ್ಮಗ್ರಂಥಗಳು. ಆಧ್ಯಾತ್ಮಿಕವಾಗಿ ಹೇಳುವುದಾದರೆ ಪಶ್ಚಾತ್ತಾಪ, ಮರುಗುವುದು ಅಂದರೆ ತನ್ನನ್ನು ತಾನು ತಿದ್ದಿಕೊಳ್ಳುವುದು. ಪಾಪಕರ್ಮಗಳನ್ನು ನೆನೆದು ದುಃಖಿಸುವವನ ಅಂತರಂಗ ಶುದ್ಧಿಯಾಗುತ್ತದೆ. ಆದಾಗ್ಯೂ ಅಪರಾಧಿಧಿಭಾವ ಹೊಂದುವುದರಿಂದ ಹಳೆಯದನ್ನು ಏನೂ ಬದಲಾವಣೆ ಮಾಡಿಕೊಳ್ಳುವುದಕ್ಕಾಗಲೀ ಅಥವಾ ಭವಿಷ್ಯವನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಆದರೆ ಮಾಡಿದ ತಪ್ಪಿಗಾಗಿ ಪಶ್ಚತ್ತಾಪ ಪಟ್ಟು ಕ್ಷ ಮೆ ಕೇಳುವುದರಿಂದ ವ್ಯಕ್ತಿಯಲ್ಲಿ ಬದಲಾವಣೆ ತರುತ್ತದೆ. ಪಶ್ಚಾತ್ತಾಪದಲ್ಲಿ ಮೂರು ಹಂತಗಳಿವೆ. ಮಾಡಿದ ತಪ್ಪಿಗಾಗಿ ಪರಿತಪಿಸುವುದು, ಅದರಿಂದ ದೂರ ಇರುವುದು, ಮತ್ತೆಂದೂ ಅದೇ ತಪ್ಪು ಮರುಕಳಿಸದಂತೆ ನೋಡಿಕೊಳ್ಳುವುದು.

ನಾವು ಯಾವುದಕ್ಕೆ ಪಶ್ಚಾತ್ತಾಪಪಟ್ಟುಕೊಳ್ಳಬೇಕು? ಪಶ್ಚಾತ್ತಾಪ ಪಟ್ಟುಕೊಳ್ಳುವುದು ನೆಗೇಟೀವ್ ಮನಸ್ಥಿತಿಯೇ? ಅಥವಾ ಅದೊಂದು ಅರಿವಿನ ಭಾವನಾತ್ಮಕ ಸ್ಥಿತಿಯೇ? ಎಷ್ಟೋ ಬಾರಿ ನಮ್ಮನ್ನು ನಾವು ಹಳಿದುಕೊಳ್ಳುತ್ತಿರುತ್ತೇವೆ. ಅಂದರೆ ಮಾಡಿದ ತಪ್ಪಿನ ಅರಿವು ಆಗಿರುತ್ತದೆ. ನಮ್ಮ ವರ್ತನೆ ಇತರರಿಗೆ ಸರಿಯಾಗಿ ಕಾಣುತ್ತಿಲ್ಲ ಎಂಬುದರ ಅರಿವಿನ ಸ್ಥಿತಿಯದು.

ಉದಾಹರಣೆಗೆ ಅಷ್ಟು ವರ್ಷ ಪ್ರೀತಿಸಿದಜೀವದ ಮೇಲೆ ಯಾಕೋ ಇನ್ನಿಲ್ಲದ ಅನುಮಾನ ಶುರುವಾಗುತ್ತದೆ. ಆದರೆ ಆ ಅನುಮಾನ ನಿಜವಲ್ಲ. ಅದೇ ಕಾರಣಕ್ಕೆ ಇಬ್ಬರ ಸಂಬಂಧವೂ ಇಲ್ಲವಾಗಿರುತ್ತದೆ. ಆಗ ತನಗೆ ಮತ್ತೊಬ್ಬರ ಮೇಲಿದ್ದ ನಕಾರಾತ್ಮಕ ಭಾವನೆಯನ್ನು ನೆನೆದು ಪಶ್ಚಾತ್ತಾಪವಾಗುತ್ತದೆ.

ಪಶ್ಚಾತ್ತಾಪ ಪಟ್ಟುಕೊಳ್ಳುವವರಲ್ಲಿ ಮಹಿಳೆಯರೇ ಹೆಚ್ಚು ಎನ್ನುತ್ತವೆ ಸಂಶೋಧನೆಗಳು. ಅದರ ಪ್ರಕಾರ ಮಹಿಳೆಯರು ಹೆಚ್ಚಾಗಿ ತಮ್ಮ ಹಳೆಯ ನೆನಪುಗಳಿಗೆ ಮರುಗುತ್ತಾರೆ.

ಶೇ.44ರಷ್ಟು ಜನ ಮಹಿಳೆಯರು ಹಾಗೂ 19% ಪುರುಷರು ಪಶ್ಚಾತ್ತಾಪ ಹೊಂದುತ್ತಾರೆ. ಪುರುಷರು ಬಹಳ ಬೇಗ ಹೊಸ ಸಂಬಂಧವನ್ನು ಬೆಳೆಸಿಕೊಂಡು ಬಿಡುತ್ತಾರೆ. ಹಾಗಾಗಿ ಅವರು ಕೊರಗುವುದು ಕಡಿಮೆ. ಮಾತ್ರವಲ್ಲ ಮತ್ತೊಂದು ಪ್ರಸ್ತುತ ಯಾರು ಸಂಬಂಧದಲ್ಲಿಲ್ಲವೋ ಅವರು ಕಳೆದುಹೋದ ಹಳೆಯ ಸಂಬಂಧದ ಬಗ್ಗೆ ಹೆಚ್ಚು ಪಶ್ಚಾತಾಪಕ್ಕೊಳಗಾಗುತ್ತಾರೆ

ಪಶ್ಚಾತ್ತಾಪ ಎಂಬುದು ಪದೇಪದೆ ಕಾಡುವ ನೋವಿನ ಅನುಭವ. ಕೆಲವೊಮ್ಮೆ ಅದುವೇ ಒತ್ತಡಕ್ಕೆ ಕಾರಣವೂ ಆಗಬಹುದು. ಅದರಿಂದ ಮಾನಸಿಕವಾಗಿ ಅಥವಾ ದೈಹಿಕವಾಗಿಯೂ ಹಾನಿಯುಂಟಾಗಬಹುದು. ನಮ್ಮ ಆಯ್ಕೆ, ತಪ್ಪುಗಳು ಹಾಗೂ ಯಶಸ್ಸಿಗೆ ಎಲ್ಲದಕ್ಕೂ ನಾವೇ ಕಾರಣರಾಗಿರುತ್ತೇವೆ. ಹಾಗಿರುವಾಗ ನಮ್ಮ ತಪ್ಪುಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು. ಆದರೆ ಯಾವುದಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳಬೇಕು ಎಂಬುದನ್ನು ನಾವೇ ನಿರ್ಧರಿಸಿಕೊಳ್ಳಬೇಕು. ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡದೇ ಇರುವುದು, ಅದನ್ನು ಸರಿಪಡಿಸಿಕೊಳ್ಳುವುದು ಕೂಡಾ ಮಹತ್ವದ್ದೇ ಆಗಿರುತ್ತದೆ.

ಪಶ್ಚಾತ್ತಾಪ ಪಡುವುದನ್ನು ಸಕಾರಾತ್ಮಕವಾಗಿ ಯೋಚಿಸುವುದಾದರೆ, ನಮ್ಮನ್ನು ನಾವು ಕೇರ್ ಮಾಡುತ್ತಿದ್ದೇವೆ ಎಂದರ್ಥ. ಇದು ಒಂದರ್ಥದಲ್ಲಿ ಒಳ್ಳೆಯದೇ. ನಕಾರಾತ್ಮಕ ಅಂಶಗಳಿಂದ ನಮ್ಮ ಸಾಮರ್ಥ್ಯದ ಬಗ್ಗೆ ನಮಗೇ ಅನುಮಾನ ಮೂಡುವಂತೆ ಮಾಡುವುದು. ಅದರಿಂದ ನಮಗೆ ನಾವೇ ಹಾನಿ ಮಾಡಿಕೊಂಡತೆ. ಹಾಗಾಗಿ ಯಾವುದೇ ಕಾರಣಕ್ಕೂ ನಕಾರಾತ್ಮಕವಾಗಿ ಪಶ್ಚಾತ್ತಾಪ ಪಟ್ಟುಕೊಳ್ಳಬಾರದು. ಕಳೆದುಹೋದುದನ್ನು ಬದಲಾಯಿಸಲಾಗದು, ವರ್ತಮಾನದಲ್ಲಿ ಬದಲಾವಣೆ ಮಾಡಿಕೊಂಡು ಭವಿಷ್ಯವನ್ನು ಸಕಾರಾತ್ಮಕವಾಗಿ ಕನೆಕ್ಟ್ ಮಾಡಿಕೊಳ್ಳಬೇಕು.

ಮನುಷ್ಯನಾಗಿರುವುದರಿಂದ ತಪ್ಪುಗಳಾಗುವುದು ಸಹಜ. ದೀರ್ಘಕಾಲದಿಂದ ಒಂದೇ ವಿಷಯಕ್ಕೆ ಮರುಗುತ್ತಿರುವಿರಾದರೆ ಸಂಬಂಧ, ಉದ್ಯೋಗ, ಆರೋಗ್ಯ ಇವೇ ಮೊದಲಾದುವುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ನಮ್ಮನ್ನು ನಾವು ದ್ವೇಷಿಸಿಕೊಳ್ಳುವುದರಿಂದ ಪ್ರಯೋಜನವಿಲ್ಲ. ಸಂತೋಷ, ಪ್ರೀತಿ, ಒಪ್ಪಿಗೆ, ಸಾಧನೆ, ಅವಲಂಬಿತರಾಗಿರುವುದು, ಔದಾರ್ಯ ಹಾಗೂ ಕೃತಜ್ಞತಾ ಭಾವ ನಮ್ಮಲ್ಲಿರಬೇಕಾದ ಗುಣಗಳು. ಅದರ ಮೇಲೆಯೇ ಹೆಚ್ಚು ಗಮನ ನೀಡಿ. ಕಳೆದುಹೋದವುಗಳಲ್ಲಿ ಯಾವುದನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲವೋ ಅವುಗಳಿಗೆ ವ್ಯಥಾ ಚಿಂತೆ ಮಾಡುವುದು ವ್ಯರ್ಥ. ತಪ್ಪಿತಸ್ಥಭಾವ ಹೊಂದುವುದರ ಮೂಲಕ ಯಾವುದೇ ಕಾರಣಕ್ಕೂ ನಕಾರಾತ್ಮಕ ಅಂಶಗಳನ್ನು ಪ್ರಚೋದಿಸದಿರಿ.

ನಮ್ಮ ಆಲೋಚನೆಗಳು ನಮ್ಮ ಭಾವನೆಗಳು ಹಾಗೂ ವರ್ತನೆ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದಕ್ಕೆ ಗೌತಮ ಬುದ್ಧ, ನಾರ್ಮನ್ ವಿನ್ಸೆಂಟ್ ಪೀಲೆ, ಗಾಂಧಿ, ಲಾವೋ ತ್ಸು, ವಿಲಿಯಂ ಶೇಕ್ಸ್ಪಿಯರ್, ಸ್ಟೀವ್ ಜಾಬ್ಸ್, ಕಾರ್ಲ್ಸಾಗನ್ ಹಾಗೂ ಆಲ್ಬರ್ಟ್ ಐನ್ ಸ್ಟೀನ್ ಅವರೇ ಸಾಕ್ಷಿ. ಹಾಗಾಗಿ ನಮ್ಮ ಆಲೋಚನೆಗಳನ್ನು, ನಮ್ಮೊಳಗಿರುವ ಒಳ್ಳೆಯ ಗುಣಗಳು ಹಾಗೂ ಸಾಮರ್ಥ್ಯಕ್ಕೆ ಹೆಮ್ಮೆ ಪಟ್ಟುಕೊಳ್ಳಬೇಕು. ಪ್ರಾಮಾಣಿಕವಾಗಿ ಕ್ಷ ಮೆಕೊಟ್ಟುಕೊಂಡು ಪಶ್ಚಾತ್ತಾಪಕ್ಕೊಳಗಾಗುವುದರಿಂದ ತಪ್ಪಿಸಿಕೊಳ್ಳಿ.