ಮನೆ ಭಾವನಾತ್ಮಕ ಲೇಖನ ವೈವಾಹಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು..?

ವೈವಾಹಿಕ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು..?

0

ಒಮ್ಮೆ ಒಬ್ಬ ವಿವಾಹ ಆಪ್ತ ಸಲಹೆಗಾರರಿಗೆ ದಂಪತಿಗಳ ನಡುವಿನ ಸಮಸ್ಯೆಗಳನ್ನು ಮತ್ತು ಅವುಗಳ ಪರಿಹಾರದ ಬಗ್ಗೆ ಪ್ರಶ್ನಿಸಲಾಯಿತು. ಅವರ ವಿವರಣೆಯು ಹೀಗಿತ್ತು. “ಕೆಲವೊಮ್ಮೆ ದಂಪತಿಗಳು ತನ್ನ ಬಳಿ ಪರಸ್ಪರ ಕಟುವಾಗಿ ದೂರನ್ನು ನೀಡಲು ಬಂದಾಗ, ನಾನು ಅವರಿಗೆ ತಮ್ಮ ಸಂಗಾತಿಯಬಗ್ಗೆ ಅವರಿಗಿರುವ ದೂರಿನ ಬದಲಿಗೆ, ಏನಾದರೂ ಮೆಚ್ಚಿದ ಅಥವಾ ಇನ್ನೂ ಮೆಚ್ಚುವ ಗುಣವಿದ್ದರೆ ಅದನ್ನು ಬರೆಯಿರಿ ಎಂದು ಹೇಳುತ್ತೇನೆ. ಆದರೆ ಯಾವುದೇ ದಂಪತಿಗಳಿಗೆ ತಮ್ಮ ಸಂಗಾತಿಯ ಕುರಿತು ಯಾವ ಮೆಚ್ಚುಗೆಯ ವಿಷಯವೂ ಇಲ್ಲದಿರುವುದನ್ನು ನಾನು ಇಲ್ಲಿಯವರೆಗೆ ಕೇಳಲಿಲ್ಲ.

Join Our Whatsapp Group

ಬಹುಬಾರಿ ಸರಳ ವಿಷಯವು ಇಡೀ ಸಂಬಂಧಕ್ಕೆ ಹೊಸ ತಿರುವನ್ನು ನೀಡಬಲ್ಲದು. ನಾನು ಈ ಸಲಹೆಯನ್ನು ನೀಡಿದ ಒಬ್ಬ ವ್ಯಕ್ತಿ ಇನ್ನೂ ಮುಂದೆ ಸಾಗಿದರು. ಅದೇ ಸಂಜೆ ಅವರು ತಮ್ಮ ಹೆಂಡತಿಯ ಪಕ್ಕದಲ್ಲಿ ಕುಳಿತು ಒಂದು ಪೇಪರ್ ಮತ್ತು ಒಂದು ಪೆನ್ಸಿಲ್ ನನ್ನು ಹಿಡಿದು ಆಕೆಯನ್ನೇ ಆಗಾಗೇ ನೋಡುತ್ತಾ ಬರೆಯುತ್ತಿದ್ದರು. ಕೊನೆಗೆ ಆಕೆ ಅವರನ್ನು “ಏನು ಮಾಡುತ್ತಿರುವೆ?” ಎಂದು ಕೇಳಿದಳು. ಆಗ ಅವರು “ನಿನ್ನ ಒಳ್ಳೆಯ ಗುಣಗಳನ್ನು ನಾನು ಬರೆಯುತ್ತಿದ್ದೇನೆ” ಎಂದರು. “ಒಳ್ಳೆಯ ಗುಣಗಳು!” ಅವಳು ಆಚ್ಚರಿಯಿಂದ ಕೇಳಿದಳು.

“ನೀನು ನನ್ನಲ್ಲಿ ಒಳ್ಳೆ ಗುಣ ಇದೆಯೆಂದು ಭಾವಿಸಿರುವೆಯೆಂದು ನನಗೆ ಅನಿಸಲೇ ಇಲ್ಲ” ಎಂದಳು. “ನಿನ್ನಲ್ಲಿ ಒಳ್ಳೆಯ ಗುಣಗಳಿವೆ” ಎಂದು ಆತ ತನ್ನ ಕೆಲಸ ಮುಂದುವರಿಸಿದನು. ಕುತೂಹಲದಿಂದ ಆಕೆ ಕಾಗದ ತೋರಿಸಿ ಎಂದು ಕೇಳಿದಳು. ಆಗ ಆತ ಮೊದಲು ಇದಕ್ಕೆ ಒಪ್ಪಲಿಲ್ಲ. ಆಕೆ ಬಹಳ ಒತ್ತಾಯಿಸಿದಾಗ ಆತ ಅವಳ ಬಗ್ಗೆ ಬರೆದದ್ದನ್ನು ಓದಿದನು. ಅದನ್ನು ಕೇಳಿ ಆಕೆ ಸಂತೋಷಪಟ್ಟಳು.

ಅವಳಿಗೆ ಬಹಳ ಆಶ್ಚರ್ಯವೂ ಆಯಿತು. “ನನ್ನ ಎಷ್ಟೋ, ವಿಷಯಗಳ ಬಗ್ಗೆ ನಿನಗೆ ಇಷ್ಟವಾಗಿದೆಯೆಂದು ನನಗೆ ತಿಳಿದಿರಲೇ ಇಲ್ಲ” ಎಂದಳು. “ಇನ್ನೂ ಬಹಳ ವಿಷಯಗಳಿವೆ. ಆದರೆ ನನಗೆ ನಿನ್ನ ಬಗ್ಗೆ ಇಷ್ಟವಿಲ್ಲದಿರುವುದು ಕೆಲವು ಇವೆ” ಎಂದು ಆತ ಖುಷಿಯಾಗಿ ಹೇಳಿದನು. “ಆಯಿತು, ಹಾಗಾದ್ರೆ ಅವುಗಳನ್ನು ಬರೆ”ಎಂದು ಅವಳು ಹೇಳಿದಳು. ಆಗ ಆತ “ನೀನು ಒಪ್ಪಿದರೆ ಅವುಗಳನ್ನೂ ಬರೆಯುವೆ” ಎಂದನು.

ಪ್ರಶ್ನೆಗಳು :-

1. ಈ ಕೆಲಸದಿಂದಾದ ಫಲವೇನು?

ಉತ್ತರಗಳು :-  ಇದರ ಫಲಿತಾಂಶವೆಂದರೆ ಇಬ್ಬರು ಸಮಾಧಾನದಿಂದ, ಶಾಂತಚಿತ್ತದಿಂದ ತಮ್ಮಿಬ್ಬರ ನಡುವಿನ ದೂರುಗಳನ್ನು ಹೊರ ತಂದರು ಹಾಗೂ ಅವುಗಳಲ್ಲಿ ಬಹಳಷ್ಟು ವಿಚಾರಗಳನ್ನು ಪರಿಹರಿಸಿಕೊಂಡರು…

2.  ಈ ಕಥೆಯ ನೀತಿಯೇನು?

ಉತ್ತರಗಳು :- ಬಹುತೇಕ ವೈವಾಹಿಕ ಸಮಸ್ಯೆಗಳು ಸೂಕ್ತವಾದ ಸಂಪರ್ಕವಿರದ ಕಾರಣ ಉಂಟಾಗುತ್ತದೆ. ವಿವಾಹಿತರು ತಮ್ಮ ಭಾವನೆಗಳನ್ನು ಪರಸ್ಪರ ಪ್ರಾಮಾಣಿಕವಾಗಿ ಸಂಪರ್ಕಿಸಿದರೆ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು.

 

 

ಹಿಂದಿನ ಲೇಖನಬಿಜೆಪಿ ಎಂಎಲ್ಎ ಟಿಕೆಟ್​​ ವಂಚನೆ ಪಕ್ರರಣದಲ್ಲಿ 185 ಕೋಟಿ ರೂ. ವ್ಯವಹಾರ: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ
ಮುಂದಿನ ಲೇಖನಕಾವೇರಿ ಬಿಕ್ಕಟ್ಟು ಚರ್ಚಿಸಲು ದೆಹಲಿಯ ತಾಜ್ಮ ಮಾನ್ ಸಿಂಗ್ ಹೋಟೆಲ್ ನಲ್ಲಿ ನಾಳೆ ಬೆಳಿಗ್ಗೆ ಮಹತ್ವದ ಸಭೆ