ಮನೆ ಉದ್ಯೋಗ ಕೆಪಿಎಸ್’ಸಿ ಇಂದ ಗ್ರೂಪ್ ಸಿ ಪರೀಕ್ಷೆಗೆ ಅಡ್ಮಿಟ್ ಕಾರ್ಡ್ ಪ್ರಕಟ

ಕೆಪಿಎಸ್’ಸಿ ಇಂದ ಗ್ರೂಪ್ ಸಿ ಪರೀಕ್ಷೆಗೆ ಅಡ್ಮಿಟ್ ಕಾರ್ಡ್ ಪ್ರಕಟ

0

ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಏಪ್ರಿಲ್ 01, 02 ರಂದು ನಡೆಸಲಿರುವ ವಿವಿಧ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಿದೆ. ಲೆಕ್ಕಪತ್ರ ಇಲಾಖೆಯ ನಿರೀಕ್ಷಕರು, ಸಹಾಯಕ ನಿರೀಕ್ಷಕರು ಮತ್ತು ಕಾರ್ಮಿಕ ಇಲಾಖೆಯ ನಿರೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕೆಪಿಎಸ್ ಸಿ ವೆಬ್ ಸೈಟ್ ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದು.

ನೇಮಕಾತಿ ಪ್ರಾಧಿಕಾರ : ಕರ್ನಾಟಕ ಲೋಕಸೇವಾ ಆಯೋಗ

ಉದ್ಯೋಗ ಇಲಾಖೆಗಳು: ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಕಾರ್ಮಿಕ ಇಲಾಖೆಯ ಹುದ್ದೆಗಳು

ಹುದ್ದೆಗಳ ವೃಂದ : ಗ್ರೂಪ್ ಸಿ ವೃಂದದ ಹುದ್ದೆಗಳು.

ಪರೀಕ್ಷೆ ದಿನಾಂಕ : ಏಪ್ರಿಲ್ 01, 02, 2023

ಪ್ರವೇಶ ಪತ್ರ ಡೌನ್ಲೋಡ್ ಹೇಗೆ?

– ಕೆಪಿಎಸ್ಸಿ ವೆಬ್ಸೈಟ್ https://www.kpscrecruitment.in/RPS/Home.aspx ಗೆ ಭೇಟಿ ನೀಡಿ.

– ಓಪನ್ ಆದ ಪೇಜ್ನಲ್ಲಿ ಯೂಸರ್ನೇಮ್ / ಪಾಸ್ವರ್ಡ್ ನೀಡಿ ಲಾಗಿನ್ ಆಗಿ.

– ನಂತರ ತೆರೆಯುವ ವೆಬ್ಪುಟದಲ್ಲಿ ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ. ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ಅಭ್ಯರ್ಥಿಗಳು ಪರೀಕ್ಷೆ ಪ್ರವೇಶ ಪತ್ರದ ಜತೆಗೆ ಅಧಿಕೃತ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೆಗೆದುಕೊಂಡು ಹಾಜರಾಗಬೇಕು.

ಕೆಪಿಎಸ್’ಸಿ ಯು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರು, ಲೆಕ್ಕ ಸಹಾಯಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಅನ್ನು ಪ್ರಕಟಿಸಿದೆ. ಆಸಕ್ತರು ಕೆಳಗಿನ ನೋಟಿಫಿಕೇಶನ್ ಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಿ.