ಮನೆ ಉದ್ಯೋಗ UPSC, KPSC ಪರೀಕ್ಷೆಗೆ ಸಿದ್ಧತೆ ನಡೆಸುತ್ತಾ ಈ ಕೆಲವು ಪರೀಕ್ಷೆಗಳನ್ನು ಸುಲಭವಾಗಿ ಪಾಸ್ ಮಾಡಬಹುದು..!

UPSC, KPSC ಪರೀಕ್ಷೆಗೆ ಸಿದ್ಧತೆ ನಡೆಸುತ್ತಾ ಈ ಕೆಲವು ಪರೀಕ್ಷೆಗಳನ್ನು ಸುಲಭವಾಗಿ ಪಾಸ್ ಮಾಡಬಹುದು..!

0

ಎಲ್ಲರೂ ಸಹ ಒಂದು ಪ್ರಯತ್ನದಲ್ಲೇ ಯಾವುದೇ ನಾಗರೀಕ ಸೇವೆಗಳ ಪರೀಕ್ಷೆಯನ್ನು ಪಾಸ್ ಮಾಡಲು ಆಗುವುದಿಲ್ಲ. ಯುಪಿಎಸ್’ಸಿ, ಕೆಪಿಎಸ್’ಸಿ ಪರೀಕ್ಷೆಗೆ ಓದುತ್ತಿರುವವರು ದೀರ್ಘಕಾಲ ಅಥವಾ ಹೆಚ್ಚು ಪ್ರಯತ್ನಗಳನ್ನು ಈ ಪರೀಕ್ಷೆಗಳನ್ನು ಪಾಸ್ ಮಾಡಲು ತೆಗೆದುಕೊಳ್ಳುತ್ತಿದ್ದಲ್ಲಿ, ಈ ನಡುವೆ ಜಾಬ್ ಶೀಘ್ರವಾಗಿ ಬೇಕು ಎನ್ನುವವರು ಈ ಕೆಳಗಿನ ಪರೀಕ್ಷೆಗಳನ್ನು ಸದರಿ ಸಿಎಸ್ಇ ಪರೀಕ್ಷೆಗಳ ಸಿದ್ಧತೆ ಜತೆಗೆಯೇ ತೆಗೆದುಕೊಳ್ಳಿ. ಸರ್ಕಾರಿ ಹುದ್ದೆಯನ್ನು ಪಡೆಯುವ ಯಾವುದಾದರೂ ಒಂದು ಗುರಿಯನ್ನು ಮುಟ್ಟಲು ಸಾಧ್ಯವಾಗುತ್ತದೆ.

ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆಗಳು

ಎಸ್’ಎಸ್’ಸಿ ಸಿಜಿಎಲ್, ಸಿಹೆಚ್ಎಸ್ಎಲ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಆಯೋಗವು ಪ್ರತಿ ವರ್ಷ ನಡೆಸುತ್ತದೆ. ಸಿಎಸ್ಇ ಪರೀಕ್ಷೆಗೆ ತಯಾರಿ ನಡೆಸಿರುವ ಅಭ್ಯರ್ಥಿಗಳು ಇದೇ ಸಮಯದಲ್ಲಿ ಎಸ್’ಎಸ್’ಸಿ ನಡೆಸುವ ಕೇಂದ್ರ ಸರ್ಕಾರದ ವಿವಿಧ ಇಲಾಖೆ, ಸಚಿವಾಲಯಗಳ ಹುದ್ದೆಗೆ ನಡೆಸುವ ನೇಮಕಾತಿ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಈ ಪರೀಕ್ಷೆಗಳಿಗೆ ಗಣಿತ / ಇಂಗ್ಲಿಷ್ ಓದಕೊಂಡಿದ್ದರೆ ಸಾಕು. ಇತರೆ ಹೆಚ್ಚಿನ ತಯಾರಿ ಅಗತ್ಯವಿಲ್ಲ. ಆದ್ದರಿಂದ ಯುಪಿಎಸ್’ಸಿ, ಕೆಪಿಎಸ್’ಸಿ ಗೆ ಓದುತ್ತಲೇ ಈ ಪರೀಕ್ಷೆಯನ್ನು ಸುಲಭವಾಗಿ ಬರೆಯಬಹುದು. ಯಾವುದೇ ಹೆಚ್ಚಿನ ಇತರೆ ಪಠ್ಯಕ್ರಮ ಓದುವ ಅಗತ್ಯ ಇರುವುದಿಲ್ಲ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರೀಕ್ಷೆ

ಭಾರತೀಯ ರಿಸರ್ವ್ ಬ್ಯಾಂಕ್ನ ಗ್ರೇಡ್ ಬಿ ಆಫೀಸರ್, ಗ್ರೂಪ್ ಸಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಉತ್ತಮ ವೇತನ ಇದೆ. ಈ ಹುದ್ದೆಗಳ ಪರೀಕ್ಷೆಗೂ, ಯುಪಿಎಸ್ಸಿ ಸಿಎಸ್ಇ ಪಠ್ಯಕ್ರಮಕ್ಕೂ ಕೆಲವು ಸಾಮ್ಯತೆ ಇದೆ. ಆದ್ದರಿಂದ ಈ ಹುದ್ದೆಗಳಿಗೆ ಪರೀಕ್ಷೆಯನ್ನು ಹೆಚ್ಚಿನ ಅಥವಾ ಬೇರೆಯ ಸಿದ್ಧತೆ ಇಲ್ಲದೇ ಎದುರಿಸಬಹುದು.

ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್

ಸಿಎಪಿಎಫ್ ಅಥವಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಪಠ್ಯಕ್ರಮಕ್ಕೂ ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆ ಪಠ್ಯಕ್ರಮಕ್ಕೂ ಹೆಚ್ಚೇನು ವ್ಯತ್ಯಾಸ ಇರುವುದಿಲ್ಲ. ಆದ್ದರಿಂದ ಯುಪಿಎಸ್ಸಿ ಪರೀಕ್ಷೆಗೆ ಓದುತ್ತಿರುವವರು ಇದರ ಸಿದ್ಧತೆಯ ಜ್ಞಾನವನ್ನೇ ಸಿಎಪಿಎಫ್ ಪರೀಕ್ಷೆಗೂ ಬಳಕೆ ಮಾಡಬಹುದು. ಸುಲಭವಾಗಿ ಪರೀಕ್ಷೆ ಪಾಸ್ ಮಾಡುವ ಅವಕಾಶವು ಇರುತ್ತದೆ.

ಸಹಾಯಕ ಪ್ರಾಧ್ಯಾಪಕರ ಹುದ್ದೆ

ಯುಪಿಎಸ್’ಸಿ, ಕೆಪಿಎಸ್’ಸಿ ಪರೀಕ್ಷೆಗೆ ಓದಬೇಕು ಎಂದುಕೊಂಡವರು, ತಾವು ಮುಖ್ಯ ಪರೀಕ್ಷೆಗೆ ಆಯ್ಕೆಮಾಡಿಕೊಳ್ಳಬೇಕು ಎಂದುಕೊಂಡ ವಿಷಯದಲ್ಲೇ ಸ್ನಾತಕೋತ್ತರ ಪದವಿಯನ್ನು ರೆಗ್ಯುಲರ್ ನಲ್ಲಿ ಅಥವಾ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಓದಿರಿ. ಹೀಗೆ ಮಾಡುವುದರಿಂದ ಮುಖ್ಯ ಪರೀಕ್ಷೆಗೆ ಹೆಚ್ಚು ಸಿದ್ಧತೆಗೆ ಮತ್ತಷ್ಟು ಅನುಕೂಲವು ಆಗುತ್ತದೆ. ಜತೆಗೆ ನಂತರದಲ್ಲಿ ಟೀಚಿಂಗ್ ಅರ್ಹತಾ ಪರೀಕ್ಷೆಗಳಾದ ಎನ್’ಇಟಿ, ಎಸ್’ಎಲ್’ಇಟಿ ಬರೆಯಬಹುದು. ಹಾಗೆ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯಬಹುದು.

ಇತರೆ ಪರೀಕ್ಷೆಗಳು

ಯುಪಿಎಸ್ಸಿ ಅಥವಾ ಕೆಪಿಎಸ್’ಸಿ ನಾಗರೀಕ ಸೇವೆಗಳಾದ ಗ್ರೂಪ್ ಎ, ಗ್ರೂಪ್ ಬಿ ಹುದ್ದೆಗಳಿಗೆ ಯಾವುದೇ ಪದವಿ ಪಾಸ್ ಮಾಡಿದವರು ಅರ್ಜಿ ಸಲ್ಲಿಸಿ ಪರೀಕ್ಷೆ ತೆಗೆದುಕೊಳ್ಳಬಹುದು. ಈ ಎರಡು ಪರೀಕ್ಷೆಗಳಿಗೂ ಸಾಮಾನ್ಯ ಜ್ಞಾನ ಪತ್ರಿಕೆ ಇರುತ್ತದೆ. ಸರ್ಕಾರದ ಇತರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಾಮಾನ್ಯ ಜ್ಞಾನ ಪತ್ರಿಕೆಯು ಇದ್ದೇ ಇರುತ್ತದೆ. ಆದ್ದರಿಂದ ಈ ಯುಪಿಎಸ್ಸಿ, ಕೆಪಿಎಸ್’ಸಿ ಪರೀಕ್ಷೆಗೆ ಓದುವವರು ರಾಜ್ಯದ ಪಿಎಸ್’ಸಿಗಳ ಎಫ್’ಡಿಎ, ಎಸ್’ಡಿಎ, ಪಿಎಸ್’ಐ, ಪಿಸಿ, ಇತರೆ ಹುದ್ದೆಗಳ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು