ಮುಂಬಯಿ: ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಎಂ.ಎಸ್.ಧೋನಿ ಅವರ ಚೆನ್ನೈ ತಂಡ ಮಾ. 31 ರಂದು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಯವ ಮೂಲಕ ಈ ಬಾರಿಯ ಐಪಿಎಲ್’ಗೆ ಚಾಲನೆ ಸಿಗಲಿದೆ.
ಧೋನಿ ಅವರಿಗೆ 41 ವರ್ಷವಾದರೂ ಅವರಿನ್ನೂ ಫಿಟ್ ಆಗಿದ್ದಾರೆ. ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ಮೈದಾನದಲ್ಲಿ ಬ್ಯಾಟ್ ಬೀಸುತ್ತಾರೆ. ಅವರ ಫಿಟ್ ನೆಸ್ ಬಗ್ಗೆ ಇದೀಗ ಟೀಮ್ ಇಂಡಿಯಾ ಕಪ್ತಾನ, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮಾತನಾಡಿದ್ದಾರೆ.
ಬುಧವಾರ ಮುಂಬೈ ಇಂಡಿಯನ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಕಾಗೋಷ್ಟಿ ನಡೆಸಿತ್ತು. ಇದರಲ್ಲಿ ರೋಹಿತ್ ಶರ್ಮಾ ಮತ್ತು ಕೋಚ್ ಮಾರ್ಕ್ ಬೌಚರ್ ಅವರು ಭಾಗವಹಿಸಿದ್ದಾರೆ. ಈ ವೇಳೆ ರೋಹಿತ್ ಶರ್ಮಾ ಧೋನಿ ಬಗ್ಗೆ ಮಾತನಾಡಿದ್ದಾರೆ.
ಇದು ಎಂಎಸ್ ಧೋನಿಯ ಕೊನೆಯ ಸೀಸನ್ ಎಂದು ನಾನು ಕಳೆದ 2-3 ವರ್ಷಗಳಿಂದ ಕೇಳುತ್ತಿದ್ದೇನೆ. ಆದರೆ ನನ್ನ ಪ್ರಕಾರ ಅವರು ಇನ್ನು 2-3 ಸೀಸನ್ ಗಳನ್ನು ಆಡುವಷ್ಟು ಫಿಟ್ ಆಗಿದ್ದಾರೆ ಎಂದಿದ್ದಾರೆ.
2008 ರಿಂದ ಚೆನ್ನೈ ತಂಡವನ್ನು ಮುನ್ನಡೆಸುತ್ತಿರುವ ಎಂ.ಎಸ್.ಧೋನಿ 234 ಪಂದ್ಯಗಳಲ್ಲಿ 4978 ರನ್ ಗಳಿಸಿ, ನಾಲ್ಕು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ರೋಹಿತ್ ಶರ್ಮಾ ಮಾತ್ರವಲ್ಲದೆ ಇತ್ತೀಚೆಗೆ ಆಸೀಸ್ ನ ಸ್ಫೋಟಕ ಆಟಗಾರ, ಚೆನ್ನೈ ತಂಡದ ಮಾಜಿ ಆಟಗಾರ ಶೇನ್ ವಾಟ್ಸನ್ ಕೂಡ ಎಂ.ಎಸ್. ಧೋನಿ ಈಗಲೂ ತುಂಬಾ ಫಿಟ್ ಆಗಿದ್ದಾರೆ ಅವರು ಇನ್ನೂ ಮೂರು – ನಾಲ್ಕು ವರ್ಷ ಆಡಬಹುದು ಎಂದಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.