ಮನೆ ರಾಷ್ಟ್ರೀಯ ಸೊಳ್ಳೆ ಬತ್ತಿಯ ಕಿಡಿಯಿಂದ ಹೊತ್ತಿಕೊಂಡ ಬೆಂಕಿಯ ವಿಷಕಾರಿ ಹೊಗೆ: ಮಗು ಸೇರಿದಂತೆ 6 ಮಂದಿ ಸಾವು

ಸೊಳ್ಳೆ ಬತ್ತಿಯ ಕಿಡಿಯಿಂದ ಹೊತ್ತಿಕೊಂಡ ಬೆಂಕಿಯ ವಿಷಕಾರಿ ಹೊಗೆ: ಮಗು ಸೇರಿದಂತೆ 6 ಮಂದಿ ಸಾವು

0

ನವದೆಹಲಿ: ಸೊಳ್ಳೆ ಬತ್ತಿಯ ಕಿಡಿಯಿಂದ ಹೊತ್ತಿಕೊಂಡ ಬೆಂಕಿಯಿಂದ ಹೊರಸೂಸಿದ  ವಿಷಕಾರಿ ಹೊಗೆಯಿಂದಾಗಿ ಉಸಿರುಗಟ್ಟಿ ಮಗು ಸೇರಿದಂತೆ ಆರು ಜನರು ಸಾವಿಗೀಡಾಗಿರುವ ಘಟನೆ ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌’ನ ಮನೆಯೊಂದರಲ್ಲಿ ನಡೆದಿದೆ.

ಘಟನೆಯಲ್ಲಿ ಇನ್ನೂ ಮೂವರು ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಶಾಸ್ತ್ರಿ ಪಾರ್ಕ್‌ನ ಮಚ್ಚಿ ಮಾರುಕಟ್ಟೆಯ ಮಜರ್ ವಾಲಾ ರಸ್ತೆಯ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಬೆಳಿಗ್ಗೆ 9 ಗಂಟೆಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಡಿಸಿಪಿ ಜಾಯ್ ಟಿರ್ಕಿ ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ತೆರಳುವ ಹೊತ್ತಿಗೆ 9 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ನಾಲ್ವರು ಪುರುಷರು, ಒಬ್ಬ ಮಹಿಳೆ, ಒಂದೂವರೆ ವರ್ಷದ ಮಗು ಮೃತಪಟ್ಟಿದೆ. ಗಾಯಗೊಂಡಿರುವ 15 ವರ್ಷದ ಬಾಲಕಿ, 45 ವರ್ಷದ ಮಹಿಳೆಗೆ ಚಿಕಿತ್ಸೆ ನಡೆಯುತ್ತಿದೆ.

ಪೊಲೀಸರ ಪ್ರಕಾರ, ರಾತ್ರಿ ಸೊಳ್ಳೆ ಓಡಿಸಲು ಹಚ್ಚಿದ್ದ ಸೊಳ್ಳೆ ಬತ್ತಿ ಹಾಸಿಗೆಯ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿದೆ. ವಿಷಕಾರಿ ಹೊಗೆಯಿಂದಾಗಿ ಮನೆಯ ಸದಸ್ಯರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ, ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.

ಘಟನೆ ಕುರಿತಂತೆ ತನಿಖೆ ನಡೆಯುತ್ತಿದೆ.