ನವದೆಹಲಿ: 2022 ರ ಭಾರತೀಯ ನ್ಯಾಯಾಂಗ ವರದಿ (ಐಜೆಆರ್) ನ ಪಟ್ಟಿಯ ನ್ಯಾಯದಾನದಲ್ಲಿ ಕರ್ನಾಟಕ ಅಗ್ರ ಸ್ಥಾನಕ್ಕೇರಿದೆ.
ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 18 ದೊಡ್ಡ ಹಾಗೂ ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು ಎರಡನೇ ಸ್ಥಾನ ಹಾಗೂ ತೆಲಂಗಾಣ 3 ನೇ ಸ್ಥಾನದಲ್ಲಿದೆ.
ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವುಗಳೇ ಮುಂತಾದ ನ್ಯಾಯದಾನದ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶ 18 ನೇ ಸ್ಥಾನದಲ್ಲಿದೆ. ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವುಗಳನ್ನು ಪರಿಗಣಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ.
ಅಚ್ಚರಿಯೆಂದರೆ, ಗುಜರಾತ್ 4 ನೇ ಸ್ಥಾನದಲ್ಲಿದ್ದು ಆಂಧ್ರಪ್ರದೇಶ 5 ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, 1 ಕೋಟಿಗೂ ಕಡಿಮೆ ಜನಸಂಖ್ಯೆ ಇರುವ 7 ಸಣ್ಣ ರಾಜ್ಯಗಳ ಪೈಕಿ ಸಿಕ್ಕೀಮ್ ಮೊದಲ ಸ್ಥಾನ ಪಡೆದಿದೆ.
2020 ರಲ್ಲಿ ಸಿಕ್ಕೀಮ್ 2 ನೇ ಸ್ಥಾನದಲ್ಲಿತ್ತು. 2020 ರಲ್ಲಿ 5 ನೇ ಸ್ಥಾನದಲ್ಲಿದ್ದ ಅರುಣಾಚಲ ಪ್ರದೇಶ ಈ ಬಾರಿ ಸಿಕ್ಕೀಮ್ ನಂತರದ ಸ್ಥಾನದಲ್ಲಿದ್ದರೆ, 2020 ರಲ್ಲಿ ಮೊದಲ ಸ್ಥಾನದಲ್ಲಿದ್ದ ತ್ರಿಪುರಾ ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಕೊನೆಯ ಸ್ಥಾನದಲ್ಲಿ ಗೋವಾ ಇದೆ.
2019 ರಲ್ಲಿ ಟಾಟಾ ಟ್ರಸ್ಟ್ ಐಜೆಆರ್ ನ್ನು ಪ್ರಾರಂಭಿಸಿತ್ತು. ಈ ವರ್ಷ ಪ್ರಕಟವಾಗಿರುವುದು 3 ನೇ ಆವೃತ್ತಿಯಾಗಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.