ಮನೆ ಕಾನೂನು ನ್ಯಾಯದಾನದಲ್ಲಿ ಅಗ್ರಸ್ಥಾನಕ್ಕೇರಿದ ಕರ್ನಾಟಕ

ನ್ಯಾಯದಾನದಲ್ಲಿ ಅಗ್ರಸ್ಥಾನಕ್ಕೇರಿದ ಕರ್ನಾಟಕ

0

ನವದೆಹಲಿ: 2022 ರ ಭಾರತೀಯ ನ್ಯಾಯಾಂಗ ವರದಿ (ಐಜೆಆರ್) ನ ಪಟ್ಟಿಯ  ನ್ಯಾಯದಾನದಲ್ಲಿ ಕರ್ನಾಟಕ ಅಗ್ರ ಸ್ಥಾನಕ್ಕೇರಿದೆ.

Join Our Whatsapp Group

ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 18 ದೊಡ್ಡ ಹಾಗೂ ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದರೆ, ತಮಿಳುನಾಡು ಎರಡನೇ ಸ್ಥಾನ ಹಾಗೂ ತೆಲಂಗಾಣ 3 ನೇ ಸ್ಥಾನದಲ್ಲಿದೆ.

ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವುಗಳೇ ಮುಂತಾದ ನ್ಯಾಯದಾನದ ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶ 18 ನೇ ಸ್ಥಾನದಲ್ಲಿದೆ. ಪೊಲೀಸ್, ನ್ಯಾಯಾಂಗ, ಕಾರಾಗೃಹಗಳು ಮತ್ತು ಕಾನೂನು ನೆರವುಗಳನ್ನು ಪರಿಗಣಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ.

ಅಚ್ಚರಿಯೆಂದರೆ, ಗುಜರಾತ್ 4 ನೇ ಸ್ಥಾನದಲ್ಲಿದ್ದು ಆಂಧ್ರಪ್ರದೇಶ 5 ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, 1 ಕೋಟಿಗೂ ಕಡಿಮೆ ಜನಸಂಖ್ಯೆ ಇರುವ 7 ಸಣ್ಣ ರಾಜ್ಯಗಳ ಪೈಕಿ ಸಿಕ್ಕೀಮ್  ಮೊದಲ ಸ್ಥಾನ ಪಡೆದಿದೆ.

2020 ರಲ್ಲಿ ಸಿಕ್ಕೀಮ್ 2 ನೇ ಸ್ಥಾನದಲ್ಲಿತ್ತು. 2020 ರಲ್ಲಿ 5 ನೇ ಸ್ಥಾನದಲ್ಲಿದ್ದ ಅರುಣಾಚಲ ಪ್ರದೇಶ ಈ ಬಾರಿ ಸಿಕ್ಕೀಮ್ ನಂತರದ ಸ್ಥಾನದಲ್ಲಿದ್ದರೆ, 2020 ರಲ್ಲಿ ಮೊದಲ ಸ್ಥಾನದಲ್ಲಿದ್ದ ತ್ರಿಪುರಾ ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಕೊನೆಯ ಸ್ಥಾನದಲ್ಲಿ ಗೋವಾ ಇದೆ.

2019 ರಲ್ಲಿ ಟಾಟಾ ಟ್ರಸ್ಟ್ ಐಜೆಆರ್ ನ್ನು ಪ್ರಾರಂಭಿಸಿತ್ತು. ಈ ವರ್ಷ ಪ್ರಕಟವಾಗಿರುವುದು 3 ನೇ ಆವೃತ್ತಿಯಾಗಿದೆ.

ಹಿಂದಿನ ಲೇಖನಐಪಿಎಲ್ ನಿಂದ ಹಿಂದೆ ಸರಿದ ಬಾಂಗ್ಲಾದೇಶದ ಆಟಗಾರ ಶಕೀಬ್‌ ಅಲ್‌ ಹಸನ್‌
ಮುಂದಿನ ಲೇಖನಕುಟುಂಬ ವ್ಯವಸ್ಥೆ ಮೇಲೆ ಸಲಿಂಗ ವಿವಾಹ ದಾಳಿ ಮಾಡುತ್ತದೆ; ಇಸ್ಲಾಂನಲ್ಲಿ ಅದಕ್ಕೆ ಮಾನ್ಯತೆ ಇಲ್ಲ: ಸುಪ್ರೀಂಗೆ ಜಾಮಿಯತ್