ಮನೆ ರಾಜಕೀಯ ವಿಧಾನಸಭಾ ಚುನಾವಣೆ: 1,510 ಕೋಟಿ ಆಸ್ತಿ ಘೋಷಿಸಿದ ಎಂಟಿಬಿ ನಾಗರಾಜ್‌  

ವಿಧಾನಸಭಾ ಚುನಾವಣೆ: 1,510 ಕೋಟಿ ಆಸ್ತಿ ಘೋಷಿಸಿದ ಎಂಟಿಬಿ ನಾಗರಾಜ್‌  

0

ಹೊಸಕೋಟೆ (ಬೆಂಗಳೂರು ಗ್ರಾ.): ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್‌ ಅವರು 1,510 ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

Join Our Whatsapp Group

ನಾಗರಾಜ್‌ 71 ಕೋಟಿ ಸಾಲ ಮಾಡಿದ್ದರೆ, ಅವರ ಪತ್ನಿ ಶಾಂತಕುಮಾರಿ 27 ಕೋಟಿ ಸಾಲ ಮಾಡಿದ್ದಾರೆ. ಒಟ್ಟು ವಿವಿಧ ಬ್ಯಾಂಕ್‌ಗಳಲ್ಲಿ 98 ಕೋಟಿ ಸಾಲ ಹೊಂದಿದ್ದಾರೆ.

9ನೇ ತರಗತಿ ಪಾಸಾಗಿರುವ ಎಂ.ಟಿ.ಬಿ ಬಳಿ ಇರುವ ಕಾರುಗಳ ಮೌಲ್ಯವೇ 1.72 ಕೋಟಿ. ಅವರ ಹೆಸರಿನಲ್ಲಿ ಐ10,  ಲ್ಯಾಂಡ್ ರೋವರ್ ಡಿವೆಂಡರ್, ಬೊಲೆರೊ ವಾಹನಗಳಿವೆ. ಅವರ ಪತ್ನಿ ಹೆಸರಲ್ಲಿ ಪೋರ್ಶ್ ಮತ್ತು ಇನೋವಾ ಕ್ರಿಸ್ಟಾ ಕಾರುಗಳಿದ್ದು ಎರಡು ಕಾರುಗಳ ಮೌಲ್ಯ 1.33 ಕೋಟಿಯಾಗಿದೆ. ಎಂಟಿಬಿ ಬಳಿ 64 ಲಕ್ಷ ಮತ್ತು ಪತ್ನಿ ಬಳಿ 34 ಲಕ್ಷ ನಗದು ಇದೆ.

2019 ಉಪ ಚುನಾವಣೆಯಲ್ಲಿ ಒಟ್ಟು 419.28 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ಈಗ ₹372 ಕೋಟಿಗೆ ಇಳಿದಿದೆ.  417.11 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೀಗ 792 ಕೋಟಿಗೆ ಏರಿಕೆ ಆಗಿದೆ.

ನಾಲ್ಕು ವರ್ಷದ ಹಿಂದೆ ಇವರ ಪತ್ನಿ ಶಾಂತಕುಮಾರಿ ಅವರ 167.34 ಕೋಟಿ ಮೌಲ್ಯದ ಚಿರಾಸ್ತಿ ಈಗ 163 ಕೋಟಿಗೆ ಇಳಿದಿದೆ.  167.34 ಕೋಟಿಯಷ್ಟು ಇದ್ದ ಸ್ಥಿರಾಸ್ತಿ 274 ಕೋಟಿಗೆ ಏರಿಕೆಯಾಗಿದೆ.

38 ಲಕ್ಷ ಮೌಲ್ಯದ ಚಿನ್ನ,  98 ಲಕ್ಷ ಮೌಲ್ಯದ ವಜ್ರ, 1.1 ಕೋಟಿ ಮೌಲ್ಯದ 214 ಕೆ.ಜಿ ಬೆಳ್ಳಿ ಸೇರಿದಂತೆ ಒಟ್ಟು 2.41 ಕೋಟಿ ಮೌಲ್ಯದ ಆಭರಣಗಳನ್ನು ಎಂಟಿಬಿ ಹೊಂದಿದ್ದಾರೆ. ಅವರ ಪತ್ನಿ ಬಳಿ 2 ಕೆ.ಜಿ ಚಿನ್ನ, 63 ಲಕ್ಷ ಮೌಲ್ಯದ ವಜ್ರ, 26 ಕೆ.ಜಿ ಬೆಳ್ಳಿ ಸೇರಿದಂತೆ ಒಟ್ಟು 1.64 ಕೋಟಿ ಮೌಲ್ಯದ ಆಭರಣಗಳಿವೆ.