ಮನೆ ಮನರಂಜನೆ ಕೆಜಿಎಫ್ 2′ ಚಿತ್ರದೆದುರು ವಿಜಯ್ ನಟನೆಯ ‘ಬೀಸ್ಟ್’ ಚಿತ್ರ ಬಿಡುಗಡೆ

ಕೆಜಿಎಫ್ 2′ ಚಿತ್ರದೆದುರು ವಿಜಯ್ ನಟನೆಯ ‘ಬೀಸ್ಟ್’ ಚಿತ್ರ ಬಿಡುಗಡೆ

0

ಏಪ್ರಿಲ್‌ನಲ್ಲಿ ‘ಕೆಜಿಎಫ್ 2’ ಬೆಳ್ಳಿತೆರೆಗೆ ಅಪ್ಪಳಿಸಲಿದ್ದು, ‘ಕೆಜಿಎಫ್ 2’ ಚಿತ್ರಕ್ಕೆ ಸವಾಲೆಸೆಯಲು ತಮಿಳಿನ ಸ್ಟಾರ್ ನಟ ವಿಜಯ್ ಸಿನಿಮಾ ಸಜ್ಜಾಗಿದೆ.

ಇತ್ತ ಬಾಕ್ಸಾಫೀಸ್‌ ಕೊಳ್ಳೆ ಹೊಡೆಯಲು ‘ಕೆಜಿಎಫ್ 2’ ಸಕಲ ಸಿದ್ಧತೆ ಮಾಡಿಕೊಂಡಿದ್ದರೆ, ಅತ್ತ ತಮಿಳಿನ ಬಹು ನಿರೀಕ್ಷಿತ ಸಿನಿಮಾ ‘ಬೀಸ್ಟ್’ ಕೂಡ ತೆರೆಗೆ ಬರುತ್ತಿದೆ. ವಿಶೇಷ ಎಂದರೆ ಈ ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ. ಏಪ್ರಿಲ್‌ನಲ್ಲಿಯೇ ಕೇವಲ ಒಂದು ದಿನದ ಹಿಂದೆ ಮುಂದೆ ರಿಲೀಸ್ ಆಗಲಿವೆ. ‘ಕೆಜಿಎಫ್ 2’ ಚಿತ್ರಕ್ಕೂ ಒಂದು ದಿನ ಮೊದಲು ಅಂದರೆ ಏಪ್ರಿಲ್ 13ಕ್ಕೆ ‘ಬೀಸ್ಟ್’ ರಿಲೀಸ್ ಆಗುತ್ತಿದೆ. ಎರಡು ಬಿಗ್ ಬಜೆಟ್ ಸಿನಿಮಾಗಳು ಒಟ್ಟಿಗೆ ತೆರೆಗೆ ಬಂದರೆ ಕಲೆಕ್ಷನ್ ಮೇಲೆ ಹೊಡೆತ ಬೀಳುವುದು ಫಿಕ್ಸ್ ಎನ್ನಲಾಗುತ್ತಿದೆ.

ಈ ಎರಡೂ ಚಿತ್ರಗಳಿಗೆ ತನ್ನದೆ ಆದ ತೂಕ ಇದೆ. ವಿಜಯ್ ಅಭಿನಯದ ‘ಬೀಸ್ಟ್’ ಕೂಡ ಸಾಕಷ್ಟು ನಿರೀಕ್ಷೆ ಕುಟ್ಟು ಹಾಕಿರುವ ಸಿನಿಮಾ. ಅಲ್ಲದೇ ಹಲವು ದಿನಗಳ ಬಳಿಕ ವಿಜಯ್ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಇನ್ನು ‘ಕೆಜಿಎಫ್ 2’ ಮೇಲಂತೂ ಅಭಿಮಾನಿಗಳ ನಿರೀಕ್ಷೆ ಅಷ್ಟಿಷ್ಟಲ್ಲ. ಭಾರತ ಮಾತ್ರವಲ್ಲ ವಿದೇಶಗಾಳಲ್ಲಿಯೂ ‘ಕೆಜಿಎಫ್ 2’ ಕ್ರೇಜ್‌ ಕ್ರಿಯೇಟ್‌ ಮಾಡಿದೆ.

‘ಬೀಸ್ಟ್’ ಸಿನಿಮಾವನ್ನು ಏಪ್ರಿಲ್ 13ಕ್ಕೆ ರಿಲೀಸ್ ಮಾಡಲೇ ಬೇಕು ಎನ್ನುವುದು ನಿರ್ಮಾಣ ಸಂಸ್ಥೆಯ ನಿರ್ಧಾರವಂತೆ. ‘ಬೀಸ್ಟ್’ ಚಿತ್ರವನ್ನು ನಿರ್ಮಾಣ ಮಾಡಿರುವ ‘ಸನ್ ಪಿಕ್ಚರ್ಸ್’ ‘ಬೀಸ್ಟ್’ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ‘ಕೆಜಿಎಫ್ 2’ ಚಿತ್ರಕ್ಕೆ ಸವಾಲೆಸೆಯಲು ‘ಬೀಸ್ಟ್’ ಸಜ್ಜಾಗಿದೆ. ‘ಕೆಜಿಎಫ್ 2’ ಜೊತೆಗೆ ‘ಬೀಸ್ಟ್’ ಬಾಕ್ಸಾಫೀಸ್ ಕಾಳಗ ಹೇಗಿರಲಿದೆ ಎಂಬುದನ್ನು ಕಾದು ನೋಡಲೇ ಬೇಕಿದೆ.