ಮನೆ ಕ್ರೀಡೆ ಟೆನಿಸ್ ಆಟಗಾರ್ತಿ ಆಶ್ಲೆ ಬಾರ್ಟಿ ನಿವೃತ್ತಿ ಘೋಷಣೆ

ಟೆನಿಸ್ ಆಟಗಾರ್ತಿ ಆಶ್ಲೆ ಬಾರ್ಟಿ ನಿವೃತ್ತಿ ಘೋಷಣೆ

0

ಬೆಂಗಳೂರು: ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಶ್ಲೆ ಬಾರ್ಟಿ ಅವರು ಟೆನಿಸ್‌ ಆಟಕ್ಕೆ ತಮ್ಮ 25ನೇ ವಯಸ್ಸಿನಲ್ಲೇ ನಿವೃತ್ತಿ ಘೋಷಿಸಿದ್ದಾರೆ.

ನಿವೃತ್ತಿ ಕುರಿತು ಇಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಅವರು ‘ಇದೊಂದು ಕಣ್ಣೀರಿನ ವಿದಾಯ’ ಎಂದು ಹೇಳಿಕೊಂಡಿದ್ದಾರೆ.

ಆದರೆ, ನಿವೃತ್ತಿಗೆ ನಿಖರ ಕಾರಣ ತಿಳಿಸಿಲ್ಲ.ತಮ್ಮ ಆಪ್ತ ಸ್ನೇಹಿತೆ ಡಬಲ್ಸ್ ಪಾಲುದಾರೆ ಕೇಸಿ ಡೆಲಕ್ವಾ ಅವರೊಂದಿಗಿನ ವಿಡಿಯೊ ಸಂದೇಶದಲ್ಲಿ ಮಾತನಾಡಿರುವ ಬಾರ್ಟಿ, ‘ನಾನು ನನ್ನ ಟೆನಿಸ್‌ ಜೀವನದಿಂದ ತುಂಬಾ ಸಂತೋಷವಾಗಿದ್ದೇನೆ. ಟೆನಿಸ್ ನನಗೆ ನೀಡಿದ ಎಲ್ಲದಕ್ಕೂ ನಾನು ತುಂಬಾ ಕೃತಜ್ಞಳಾಗಿದ್ದೇನೆ. ಆದರೆ, ಅದರಿಂದ ದೂರ ಸರಿಯಲು ಮತ್ತು ಇತರ ಕನಸುಗಳನ್ನು ಬೆನ್ನಟ್ಟಲು ಇದು ಸರಿಯಾದ ಸಮಯ ಎಂದು ನನಗೆ ತಿಳಿದಿದೆ’ ಎಂದಿದ್ದಾರೆ.

ಎರಡು ಬಾರಿ ವಿಶ್ವದ ನಂಬರ್ 1 ಆಟಗಾರ್ತಿಯಾಗಿದ್ದ ಆಸ್ಟ್ರೇಲಿಯಾ ಮೂಲದ ಬಾರ್ಟಿ ಅವರು, ಮೂರು ಬಾರಿ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.2019 ರಲ್ಲಿ ಫ್ರೆಂಚ್ ಓಪನ್, 2021 ರಲ್ಲಿ ವಿಂಬಲ್ಡನ್ ಮತ್ತು 2022 ರಲ್ಲಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದರು.