ಮನೆ ಅಂತಾರಾಷ್ಟ್ರೀಯ ಸುಡಾನ್ ನಲ್ಲಿ ಸೇನಾ ಸಂಘರ್ಷ: 135 ಭಾರತೀಯರ 3ನೇ ಬ್ಯಾಚ್ ತಾಯ್ನಾಡಿಗೆ

ಸುಡಾನ್ ನಲ್ಲಿ ಸೇನಾ ಸಂಘರ್ಷ: 135 ಭಾರತೀಯರ 3ನೇ ಬ್ಯಾಚ್ ತಾಯ್ನಾಡಿಗೆ

0

ನವದೆಹಲಿ: ಸುಡಾನ್ ಸೇನಾ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ತವರಿಗೆ ಕರೆತರುವ ಆಪರೇಷನ್ ಕಾವೇರಿ ಮುಂದುವರೆದಿದ್ದು, ಐಎಎಫ್’ನ ಎರಡನೇ ವಿಮಾನ C-130J ದಲ್ಲಿ 135 ಭಾರತೀಯರ ಮೂರನೇ ಬ್ಯಾಚ್ ಬುಧವಾರ ಸುಡಾನ್ ನಿಂದ ಹೊರಟಿದೆ.

Join Our Whatsapp Group

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು, ಸುಡಾನ್ ನಿಂದ ಆಗಮಿಸಿದ 148 ಭಾರತೀಯರ ಎರಡನೇ ಬ್ಯಾಚ್ ಅನ್ನು ಸ್ವಾಗತಿಸಿದರು.

ಇದಕ್ಕೂ ಮುನ್ನ ನೌಕಾಪಡೆಯ ನೌಕೆ ಐಎನ್’ಎಸ್ ಸುಮೇಧಾ 278 ಭಾರತೀಯರನ್ನು ಜೆಡ್ಡಾ ಬಂದರಿಗೆ ತಲುಪಿಸಿತ್ತು.

“ಆಪರೇಷನ್ ಕಾವೇರಿ ಸಂಪೂರ್ಣ ಸ್ವಿಂಗ್ ನಲ್ಲಿದೆ. ಐಎಎಫ್ ನ C-130J ಎರಡನೇ ವಿಮಾನವು ಪೋರ್ಟ್ ಸುಡಾನ್ ನಿಂದ ಜೆಡ್ಡಾಗೆ ಹೊರಡುತ್ತಿದೆ. ಈ ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಆಪರೇಷನ್ ಕಾವೇರಿ ಅಡಿಯಲ್ಲಿ ಸ್ಥಳಾಂತರಿಸಲ್ಪಟ್ಟ ಮೂರನೇ ಬ್ಯಾಚ್ ಆಗಿದೆ” ಎಂದು ಎಂಇಎ ಟ್ವೀಟ್ ಮಾಡಿದೆ.