ಮನೆ ತಂತ್ರಜ್ಞಾನ ಒಂದೇ ವಾಟ್ಸ್​ ಆ್ಯಪ್ ಖಾತೆ ನಾಲ್ಕು ಫೋನ್ ಗಳಲ್ಲಿ ಬಳಸಲು ಅವಕಾಶ

ಒಂದೇ ವಾಟ್ಸ್​ ಆ್ಯಪ್ ಖಾತೆ ನಾಲ್ಕು ಫೋನ್ ಗಳಲ್ಲಿ ಬಳಸಲು ಅವಕಾಶ

0

ಒಂದು ವಾಟ್ಸ್​​ಆ್ಯಪ್​ ಖಾತೆಯನ್ನು ಮೊಬೈಲ್, ಲ್ಯಾಪ್ ​ಟಾಪ್​, ಡೆಸ್ಕ್​ ಟಾಪ್ ​​ಗಳಲ್ಲಿ ಬಳಸಲು ಅವಕಾಶವಿದ್ದರೆ ಒಂದಕ್ಕಿಂತ ಹೆಚ್ಚು ಸ್ಮಾರ್ಟ್​ಫೋನ್​ಗಳಲ್ಲಿ ಬಳಸಲು ಈವರೆಗೆ ಅವಕಾಶವಿರಲಿಲ್ಲ. ಇದೀಗ ಮೆಸೇಜಿಂಗ್ ಆ್ಯಪ್ ಹೊಸ ಆಯ್ಕೆಯನ್ನು ಬಳಕೆದಾರರಿಗೆ ನೀಡಿದ್ದು, ಒಂದೇ ಬಾರಿಗೆ ನಾಲ್ಕು ಫೋನ್ ​ಗಳಲ್ಲಿ ಒಂದೇ ವಾಟ್ಸ್​​ಆ್ಯಪ್ ಖಾತೆಯನ್ನು ಬಳಸಬಹುದಾಗಿದೆ.

Join Our Whatsapp Group

ಈ ವಿಚಾರವಾಗಿ ವಾಟ್ಸ್​​ಆ್ಯಪ್ ಒಡೆತನ ಹೊಂದಿರುವ ಮೆಟಾ ಸಿಇಒ ಮಾರ್ಕ್​ ಝುಕರ್​ಬರ್ಗ್ ಫೇಸ್​​ಬುಕ್​ ನಲ್ಲಿ ಮಾಹಿತಿ ನೀಡಿದ್ದಾರೆ. ಇಂದಿನಿಂದ, ನೀವು ನಾಲ್ಕು ಫೋನ್‌ ಗಳಲ್ಲಿ ಒಂದೇ ವಾಟ್ಸ್​​ಆ್ಯಪ್ ಖಾತೆಗೆ ಲಾಗ್ ಇನ್ ಮಾಡಿಕೊಳ್ಳಬಹುದು ಎಂದು ಅವರು ಉಲ್ಲೇಖಿಸಿದ್ದಾರೆ.

ಬೇರೆ ಫೋನ್ ​ನಲ್ಲಿ ವಾಟ್ಸ್​ಆ್ಯಪ್ ಖಾತೆ ಬಳಸಬೇಕಿದ್ದರೆ ಹೊಸದಾಗಿ ಇನ್ ​​ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಖಾತೆ ಸೆಟಪ್ ಮಾಡುವಾಗ ಫೋನ್ ನಂಬರ್ ನಮೂದಿಸುವ ಬದಲು ‘ಅಸ್ತಿತ್ವದಲ್ಲಿರುವ ಖಾತೆ’ ಆಯ್ಕೆಯನ್ನು ಆಯ್ದುಕೊಳ್ಳಬೇಕು. ಆಗ ಕ್ಯುಆರ್ ಕೋಡ್ ಕಾಣಿಸುತ್ತದೆ. ನಂತರ ನೀವು ಈಗಾಗಲೇ ವಾಟ್ಸ್​ ಆ್ಯಪ್ ಖಾತೆ ಹೊಂದಿರುವ ಫೋನ್​ನಿಂದ ಸ್ಕ್ಯಾನ್ ಮಾಡುವ ಮೂಲಕ ಲಾಗಿನ್ ಆಗಬಹುದು. ಹೊಸ ಆಯ್ಕೆಯು iOS ಮತ್ತು Android ಸ್ಮಾರ್ಟ್ ​​ಫೋನ್ ​ಗಳಲ್ಲಿ ಲಭ್ಯವಿದೆ.

ಮೊದಲು ವಾಟ್ಸ್​ಆ್ಯಪ್​ ಲಾಗಿನ್ ಆಗಿರುವ ಮೊಬೈಲ್ ​ಫೋನ್ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ, ಆ ನಂತರ ವಾಟ್ಸ್​ಆ್ಯಪ್ ಲಾಗಿನ್ ಆಗಿರುವ ಎಲ್ಲ ಫೋನ್ ​ಗಳಿಂದ ಸ್ವಯಂಚಾಲಿತವಾಗಿ ಲಾಗೌಟ್ ಆಗಲಿದೆ. ಏಕ ಕಾಲಕ್ಕೆ ನಾಲ್ಕು ಫೋನ್​ ಗಳಲ್ಲಿ ವಾಟ್ಸ್ ​​ಆ್ಯಪ್ ​ನ ಒಂದೇ ಖಾತೆ ಬಳಸುವ ಈ ಆಯ್ಕೆಯಿಂದ ಸಂದೇಶ ಕಳುಹಿಸುವ ಪ್ರಕ್ರಿಯೆ ಇನ್ನಷ್ಟು ಸರಳಗೊಳ್ಳಲಿದೆ. ಸೈನ್ ಔಟ್ ಮಾಡದೆಯೇ ಬೇರೆ ಫೋನ್​ನಿಂದ ಮೆಸೇಜ್ ಕಳುಹಿಸುವುದು, ಅರ್ಧಕ್ಕೆ ನಿಲ್ಲಿಸಿದ್ದ ಚಾಟ್​ಗಳನ್ನು ಮುಂದುವರಿಸಲು ಅನುಕೂಲವಾಗಲಿದೆ ಎಂದು ಕಂಪನಿ ತಿಳಿಸಿದೆ.

ಉದ್ಯಮಗಳಿಗೆ, ವ್ಯಾಪಾರಿಗಳಿಗೆ ಪ್ರಯೋಜನ

ಹೊಸ ಆಯ್ಕೆಯಿಂದ ಉದ್ಯಮ ಸಂಸ್ಥೆಗಳಿಗೆ, ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ. ಉದ್ಯಮ ಸಂಸ್ಥೆಗಳ ಉದ್ಯೋಗಿಗಳು ಒಂದೇ ಖಾತೆಯನ್ನು ನಾಲ್ಕು ಮೊಬೈಲ್​ ಗಳಲ್ಲಿ ಬಳಸುವ ಮೂಲಕ ಗ್ರಾಹಕರ ಜತೆ ಸಂವಹನ ನಡೆಸಲು ಅನುಕೂಲವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ಅಪ್​ಡೇಟ್​ ವಿಶ್ವದಾದ್ಯಂತ ಎಲ್ಲ ಬಳಕೆದಾರರಿಗೆ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ.

ಹಿಂದಿನ ಲೇಖನಸುಡಾನ್ ನಲ್ಲಿ ಸೇನಾ ಸಂಘರ್ಷ: 135 ಭಾರತೀಯರ 3ನೇ ಬ್ಯಾಚ್ ತಾಯ್ನಾಡಿಗೆ
ಮುಂದಿನ ಲೇಖನಯುವತಿಯೊಂದಿಗೆ ರ್ಯಾಪಿಡೋ ಬೈಕ್ ಚಾಲಕ ಅನುಚಿತ ವರ್ತನೆ: ಚಲಿಸುತ್ತಿದ್ದ ಬೈಕ್ ನಿಂದ ಜಿಗಿದ ಯುವತಿ