ಇಂದೋರ್: ಬ್ಯೂಟಿ ಪಾರ್ಲರ್ ಹೋಗುವುದನ್ನು ನಿಲ್ಲಿಸುವಂತೆ ಹೇಳಿದ ಗಂಡನ ಮೇಲೆ ಕೋಪಗೊಂಡ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ.
ರೀನಾ ಯಾದವ್ (34) ಮೃತ ಮಹಿಳೆ.
ಬಲರಾಮ್ ರೀನಾ ಯಾದವ್ ಎಂಬ ಮಹಿಳೆ ಜೊತೆ 15 ವರ್ಷದ ಹಿಂದೆ ಮದುವೆಯಾಗಿದ್ದಾರೆ. ಆಗಾಗ ಮನೆಯಲ್ಲೇ ಇರುತ್ತಿದ್ದ ಪತಿ ಬಲರಾಮ್ ತನ್ನ ಪತ್ನಿ ರೀನಾ ಅವರಿಗೆ ಬ್ಯೂಟಿ ಪಾರ್ಲರ್ ಹೋಗುವುದನ್ನು ನಿಲ್ಲಿಸಿ ಎಂದಿದ್ದಾರೆ. ಇದೇ ಕಾರಣದಿಂದ ಸಿಟ್ಟಾಗಿದ್ದ ಪತ್ನಿ ರೀನಾ ಯಾದವ್ ನೇಣಿಗೆ ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆ ಬಳಿಕ ಪೊಲೀಸರಿಗೆ ಪತಿಯೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ತೆಗೆದುಕೊಂಡು ಹೋಗಿದ್ದಾರೆ.