ಮನೆ ರಾಜ್ಯ ಬೆಂಗಳೂರಿಗರಿಗೆ ಗುಡ್‌ನ್ಯೂಸ್ – ಮೇ 16ರಿಂದ ಬೃಹತ್ ಇ-ಖಾತಾ ಮೇಳ..!

ಬೆಂಗಳೂರಿಗರಿಗೆ ಗುಡ್‌ನ್ಯೂಸ್ – ಮೇ 16ರಿಂದ ಬೃಹತ್ ಇ-ಖಾತಾ ಮೇಳ..!

0

ಬೆಂಗಳೂರು : ಸಿಲಿಕಾನ್ ಸಿಟಿ ಮಂದಿಗೆ ಜಿಬಿಎ ಗುಡ್ ನ್ಯೂಸ್ ನೀಡುತ್ತಿದೆ. ಅದರಲ್ಲೂ ಇ-ಖಾತಾ ಆಗದೇ ಇರುವವರಿಗೆ ಮನೆ ಬಾಗಿಲಿಗೆ ಇ-ಖಾತಾ ತಲುಪಿಸಲು ಮುಂದಾಗಿದೆ. ಇದೇ ಮೇ 16ರಿಂದ ಬೃಹತ್ ಇ ಖಾತಾ ಮೇಳ ಮಾಡಲು ಜಿಬಿಎ ನಿರ್ಧರಿಸಿದೆ.

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 50 ಕಡೆಗಳಲ್ಲಿ ಇ-ಖಾತಾ ಮೇಳ ನಡೆಸಲಿದ್ದಾರೆ. ಸುಮಾರು 25 ಲಕ್ಷ ಖಾತಾಗಳನ್ನ ಇ-ಖಾತಾ ವ್ಯಾಪ್ತಿಗೆ ತರುವುದಕ್ಕೆ ಮುಂದಾಗಿದ್ದಾರೆ. ಮೇ 16ರ ನಂತರ ಪ್ರತಿ ಶನಿವಾರ ಇ-ಖಾತಾ ಮೇಳ ನಡೆಸಲಿದ್ದು, ಬೆಂಗಳೂರಿಗರು ಅಗತ್ಯ ದಾಖಲೆಗಳನ್ನ ತೆಗೆದುಕೊಂಡು ಇ-ಖಾತಾಗೆ ಅರ್ಜಿ ಅಪ್ಲೈ ಮಾಡಿ ಇ-ಖಾತಾವನ್ನ ಪಡೆಯಬಹುದಾಗಿದೆ.

25 ಲಕ್ಷ ಆಸ್ತಿಯನ್ನ ಇ-ಖಾತಾ ವ್ಯಾಪ್ತಿಗೆ ತರುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ 10 ಲಕ್ಷ ಇ-ಖಾತಾಗಳನ್ನ ವಿತರಣೆ ಮಾಡಲಾಗಿದೆ. ಇ-ಖಾತಾ ಮೇಳದಲ್ಲಿ ನೇರವಾಗಿ ಸಾರ್ವಜನಿಕರೇ ಇ-ಖಾತಾ ಪಡೆಯಬಹುದು. ಯಾವುದೇ ಮಧ್ಯವರ್ತಿಗಳ ಕಾಟ ಇರಲ್ಲ, ಲಂಚಕ್ಕೆ ಬೇಡಿಕೆ ಇರಲ್ಲ ಎಂದು ಹೇಳಲಾಗಿದೆ.