ಮನೆ ದೇವರ ನಾಮ ಶೃಂಗಾರ ರೂಪನು ಷಣ್ಮುಖನು

ಶೃಂಗಾರ ರೂಪನು ಷಣ್ಮುಖನು

0

ಶೃಂಗಾರ ರೂಪನು ಷಣ್ಮುಖನು |

ಶೃಂಗಾರ ರೂಪನು ಷಣ್ಮುಖನು |

 ಬಂಗಾರದೊಡಲಿನ ಕರುಣಾಂತರಂಗನು |

ದಂಡಾಯುಧವನು ಧರಿಸಿದ ಸ್ವಾಮಿಯು |

ಧರ್ಮವ ಕಾಯುವ ಕಂಕಣ ಬದ್ಧನು||

ಪಾರ್ವತಿ ಪ್ರೇಮದಿ ಹರಸಿದ ಕುವರನು |

ಪರಶಿವ ಮೆಚ್ಚಿದ ಪಂಡಿತನು |

ಪಾಪವ ನೀಗುವ ಪರಮ ಪುನೀತನು |

ಬಡವರ ಕಷ್ಟವ ಬಲ್ಲವನೀತನು||1||

ಗಂಗೆಯು ಸಹಿಸದ ಬೆಂಕಿಯ ಬಡಲು |

ಅಂತರಂಗವಿದು ಪ್ರೇಮದ ಕಡಲು |

ಆನಂದ ಮೂರುತಿ ನಗುನಗುತಿರಲು |

ಕೈಲಾಸ ಭುವಿಯಲ್ಲಿ ಯಾವಾಗಲೂ||2||