ಮನೆ ಕ್ರೀಡೆ ಐಪಿಎಲ್-2023: ಪಾಯಿಂಟ್ ಟೇಬಲ್​’ನಲ್ಲಿ ಮೇಲೇರಿದ ಆರ್​’ಸಿಬಿ

ಐಪಿಎಲ್-2023: ಪಾಯಿಂಟ್ ಟೇಬಲ್​’ನಲ್ಲಿ ಮೇಲೇರಿದ ಆರ್​’ಸಿಬಿ

0

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್ ಟೂರ್ನಿಯಲ್ಲಿ 56 ಪಂದ್ಯಗಳು ಮುಕ್ತಾಯಗೊಂಡಿದೆ.

Join Our Whatsapp Group

ಗುರುವಾರ ನಡೆದ ಕೋಲ್ಕತ್ತಾ ನೈಡ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಮುಖಾಮುಖಿಯಲ್ಲಿ ಆರ್​ಆರ್​ 9 ವಿಕೆಟ್​ಗಳ ಜಯ ಕಂಡಿತು. ಇಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ಸೆಣೆಸಾಟ ನಡೆಸಲಿದೆ. ಸದ್ಯ ಐಪಿಎಲ್ 2023 ಪಾಯಿಂಟ್ಸ್ ಟೇಬಲ್​ ಹೇಗಿದೆ? ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಗುಜರಾತ್ ಟೈಟಾನ್ಸ್ ತಂಡ ಭರ್ಜರಿ ಪ್ರದರ್ಶನ ತೋರಿ ಅಗ್ರಸ್ಥಾನದಲ್ಲಿ ಭದ್ರವಾಗಿದ್ದು ಪ್ಲೇ ಆಫ್’​ಗೆ ಬಹುತೇಕ ಕಾಲಿಟ್ಟಿದೆ. ಆಡಿದ 11 ಪಂದ್ಯಗಳಲ್ಲಿ ಎಂಟು ಗೆಲುವು, ಮೂರು ಸೋಲುಂಡು +0.951 ರನ್​’ರೇಟ್​’ನೊಂದಿಗೆ 16 ಅಂಕ ಸಂಪಾದಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಆಡಿದ 12 ಪಂದ್ಯಗಳ ಪೈಕಿ ಏಳರಲ್ಲಿ ಗೆಲುವು ನಾಲ್ಕರಲ್ಲಿ ಸೋಲು ಕಂಡು ಒಟ್ಟು 15 ಅಂಕ ಸಂಪಾದಿಸಿದೆ. +0.493 ರನ್’​ರೇಟ್ ಹೊಂದಿದೆ.

ಕೆಕೆಆರ್ ವಿರುದ್ಧ ಗೆಲ್ಲುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಪಾಯಿಂಟ್ ಟೇಬಲ್​ನಲ್ಲಿ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಆಡಿದ 12 ಪಂದ್ಯಗಳಲ್ಲಿ ಆರು ಗೆಲುವು, ಆರು ಸೋಲುಂಡು +0.633ರನ್​’ರೇಟ್​ನೊಂದಿಗೆ 12 ಅಂಕ ಸಂಪಾದಿಸಿದೆ.

ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇವರು ಆಡಿದ 11 ಪಂದ್ಯದಲ್ಲಿ 5 ಸೋಲು, ಆರು ಗೆಲುವು ಕಂಡು 12 ಅಂಕ ಸಂಪಾದಿಸಿ -0.255 ರನ್​’ರೇಟ್ ಹೊಂದಿದೆ.

ಲಖನೌ ಸೂಪರ್ ಜೇಂಟ್ಸ್ ತಂಡ ಐದನೇ ಸ್ಥಾನದಲ್ಲಿದೆ. ಆಡಿದ ಹನ್ನೊಂದು ಪಂದ್ಯಗಳಲ್ಲಿ ಐದು ಗೆಲುವು, ಐದು ಸೋಲು ಕಂಡು 11 ಅಂಕ ಸಂಪಾದಿಸಿ +0.294 ರನ್’​ರೇಟ್​ ಹೊಂದಿದೆ.

ಕೆಕೆಆರ್ ಸೋತ ಪರಿಣಾಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಸ್ಥಾನ ಮೇಲೇರಿ ಆರನೇ ಸ್ಥಾನದಲ್ಲಿದೆ. ಆಡಿದ ಹನ್ನೊಂದು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು 10 ಅಂಕ ಸಂಪಾದಿಸಿ -0.345 ರನ್​’ರೇಟ್ ಹೊಂದಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಏಳನೇ ಸ್ಥಾನಕ್ಕೆ ಕುಸಿದಿದೆ. ಆಡಿದ 12 ಪಂದ್ಯಗಳಲ್ಲಿ ಐದು ಗೆಲುವು, ಏಳರಲ್ಲಿ ಸೋಲುಂಡು -0.357 ರನ್’​ರೇಟ್​ನೊಂದಿಗೆ 10 ಅಂಕ ಸಂಪಾದಿಸಿದೆ.

ಪಂಜಾಬ್ ಕಿಂಗ್ಸ್ ಆಡಿದ 11 ಪಂದ್ಯಗಳಲ್ಲಿ ಆರು ಸೋಲು- ಐದು ಜಯ ಕಂಡು 10 ಅಂಕ ಹೊಂದಿ -0.441ರನ್​’ರೇಟ್​’ನೊಂದಿಗೆ ಏಳನೇ ಸ್ಥಾನಲ್ಲಿದೆ.

ಸನ್​ರೈಸರ್ಸ್ ಹೈದರಾಬಾದ್ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಆಡಿದ 10 ಪಂದ್ಯದಲ್ಲಿ ಆರರಲ್ಲಿ ಸೋಲು ನಾಲ್ಕರಲ್ಲಿ ಜಯ ಕಂಡು 8 ಅಂಕ ಸಂಪಾದಿಸಿ -0.472 ರನ್’​ರೇಟ್ ಹೊಂದಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿ, ಏಳು ಪಂದ್ಯಗಳಲ್ಲಿ ಸೋಲುಂಡು 8 ಅಂಕ ಸಂಪಾದಿಸಿ -0.605 ರನ್’​ರೇಟ್ ಹೊಂದಿದೆ.