ಮನೆ ಅಂತರಾಷ್ಟ್ರೀಯ ವಿಶ್ವವಿಖ್ಯಾತಿ ಮನ್ನಣೆ ಪಡೆದ ಮೈಸೂರಿನಿಂದ 1.20 ಲಕ್ಷ ಬಾಟಲಿ ಶಾಯಿ ಪೂರೈಕೆ

ವಿಶ್ವವಿಖ್ಯಾತಿ ಮನ್ನಣೆ ಪಡೆದ ಮೈಸೂರಿನಿಂದ 1.20 ಲಕ್ಷ ಬಾಟಲಿ ಶಾಯಿ ಪೂರೈಕೆ

0

ಮೈಸೂರಿನಿಂದ 1.20 ಲಕ್ಷ ಬಾಟಲಿ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ. ಮೈಸೂರು ಪೇಂಟ್ಸ್ & ವಾರ್ನಿಷ್ ಸಂಸ್ಥೆಯಿಂದ ಶಾಯಿ ಪೂರೈಕೆ ಆಗಿದೆ. 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಲ್ಯಾಕ್ ಸಂಸ್ಥೆ ಸ್ಥಾಪಿಸಿದ್ರು. 1962 ರಲ್ಲಿ ಆರಂಭವಾದ ಅಳಿಸಲಾಗದ ಶಾಯಿ ತಯಾರಿಕೆ ವಿಶ್ವವಿಖ್ಯಾತಿ ಮನ್ನಣೆ ಪಡೆದಿದೆ.

ಕರ್ನಾಟಕ ವಿಧಾನಸಭಾ ಎಲೆಕ್ಷನ್‌ಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆದಿದೆ. ಇನ್ನೂ ಮೈಸೂರಿನಿಂದ ರಾಜ್ಯದ ವಿವಿಧೆಡೆ 1.20 ಲಕ್ಷ ಬಾಟಲಿ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದ್ದು, ಹೊರ ರಾಜ್ಯ, ವಿದೇಶಗಳ ಚುನಾವಣೆಗೂ ಇಲ್ಲಿಂದಲೇ ಶಾಹಿ ಪೂರೈಕೆ ಮಾಡುವುದು ವಿಶೇಷ.


ಜಿಲ್ಲೆಯಲ್ಲಿ ಒಟ್ಟು 143 ಅಭ್ಯರ್ಥಿಗಳು ಕಣದಲ್ಲಿದ್ದು, 26 ಲಕ್ಷದ 55 ಸಾವಿರದ 988 ಮತದಾರರು. ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. 13,17,121 ಪುರುಷರು, 13,38,637 ಮಹಿಳೆಯರು ಸೇರಿ 230 ಇತರೆ ಮತದಾರರಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 2,905 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದ್ದು, ಮತಗಟ್ಟೆಗಳಲ್ಲಿ ಯಾವುದೇ ಲೋಪಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಮಸ್ಟ್ರಿಂಗ್ ಕಾರ್ಯ
ಮೈಸೂರು ಜಿಲ್ಲಾಡಳಿತ ಸಜ್ಜಾಗಿದ್ದು, 11 ಕ್ಷೇತ್ರಕ್ಕೆ 11 ಮಸ್ಟರಿಂಗ್ ಸೆಂಟರ್ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ವಿವಿ ಪ್ಯಾಟ್ ರವಾನೆ ಸೇರಿ ಇನ್ನುಳಿದ ಸಿದ್ಧತೆಗಳ ಬಗ್ಗೆ ಅಂತಿಮ ಹಂತದ ಪರಿಶೀಲನೆ ನಡೆದಿದೆ. EVMನಲ್ಲಿ ಅಣಕು ಮತದಾನ ಮಾಡಿ ಚುನಾವಣಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಯ ಗೊಂದಲ ಪರಿಹಾರಕ್ಕೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಭದ್ರತೆಗಾಗಿ ಪ್ರತಿ ಮಸ್ಟರಿಂಗ್ ಸೆಂಟರ್ಗೆ 300 ಪೊಲೀಸರನ್ನು ನಿಯೋಜಿಸಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 6,000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. 11 ಕ್ಷೇತ್ರಗಳ ವ್ಯಾಪ್ತಿಯಲ್ಲಿ 2,905 ಮತಗಟ್ಟೆಗಳನ್ನ ಸ್ಥಾಪಿಸಲಾಗಿದ್ದು, ಮತಗಟ್ಟೆಗಳಲ್ಲಿ 3156 ಅಧ್ಯಕ್ಷಾಧಿಕಾರಿಗಳು, 3250 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 6352 ಮತದಾನಾಧಿಕಾರಿಗಳು ಮತ್ತು 600 ಮೈಕ್ರೋ ಅಬ್ಸರ್‌ವರ್‌ಗಳನ್ನು ನಿಯೋಜಿಸಲಾಗಿದೆ.

ಮೈಸೂರು ಇಂಕ್

ವಿಧಾನಸಭೆ ಚುನಾವಣೆಗೆ ಅಳಿಸಲಾಗದ ಶಾಯಿಗಳ ಬಳಕೆ ಮಾಡಲಾಗುತ್ತಿದೆ. ಮೈಸೂರಿನಿಂದ 1.20 ಲಕ್ಷ ಬಾಟಲಿ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ. ಮೈಸೂರು ಪೇಂಟ್ಸ್ & ವಾರ್ನಿಷ್ ಸಂಸ್ಥೆಯಿಂದ ಶಾಯಿ ಪೂರೈಕೆ ಆಗಿದೆ. 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಲ್ಯಾಕ್ ಸಂಸ್ಥೆ ಸ್ಥಾಪಿಸಿದ್ರು. 1962ರಲ್ಲಿ ಆರಂಭವಾದ ಅಳಿಸಲಾಗದ ಶಾಯಿ ತಯಾರಿಕೆ ವಿಶ್ವವಿಖ್ಯಾತಿ ಮನ್ನಣೆ ಪಡೆದಿದೆ. ಹೊರ ರಾಜ್ಯದ ಚುನಾವಣೆಗೂ ಇಲ್ಲಿಂದಲೇ ಶಾಯಿ ಪೂರೈಕೆ ಆಗುತ್ತಾ ಬಂದಿದೆ.

ಹಿಂದಿನ ಲೇಖನಮತ ಚಲಾಯಿಸಲು ಗೋವಾದಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಸಾವಿರಾರು ಕಾರ್ಮಿಕರು: ಬೆಳಗಾವಿ ಗಡಿಯಲ್ಲಿ ಕಟ್ಟೆಚ್ಚರ
ಮುಂದಿನ ಲೇಖನಪಾಕ್​ ಪ್ರವಾಸ ಒಲ್ಲೆ ಎಂದ ಭಾರತಕ್ಕೆ ಇತರ ರಾಷ್ಟ್ರಗಳ ಬೆಂಬಲ: ಪಾಕಿಸ್ತಾನದ ಕೈ ತಪ್ಪಿದ ಏಷ್ಯಾಕಪ್​ಗೆ ಲಂಕಾ ಆತಿಥ್ಯ?