ಮನೆ ತಂತ್ರಜ್ಞಾನ ನೋಕಿಯಾ 105 ಪ್ಲಸ್ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ: ಆಫರ್ ತಿಳಿಯಲು ಸುದ್ದಿ ಓದಿ

ನೋಕಿಯಾ 105 ಪ್ಲಸ್ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ: ಆಫರ್ ತಿಳಿಯಲು ಸುದ್ದಿ ಓದಿ

0

ನೋಕಿಯಾ ಸಂಸ್ಥೆಯ ನೋಕಿಯಾ 105 ಸ್ಮಾರ್ಟ್‌’ಫೋನ್‌ ಇದೀಗ ಅಮೆಜಾನ್ ಇ ಕಾಮರ್ಸ್‌ ತಾಣದಲ್ಲಿ ಬಿಗ್ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಅಚ್ಚರಿ ಆಗುವಂತೆ ಮಾಡಿದೆ.

Join Our Whatsapp Group

ನೋಕಿಯಾ ಸಂಸ್ಥೆಯ ನೋಕಿಯಾ 105 ಪ್ಲಸ್‌ ಫೋನ್ ಅಮೆಜಾನ್ ಆನ್‌’ಲೈನ್‌ ತಾಣದಲ್ಲಿ ಈಗ 21% ನಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌’ಫೋನ್ 1,699ರೂ. ಪ್ರೈಸ್‌ ಟ್ಯಾಗ್‌ ಹೊಂದಿದ್ದು, ಆದರೆ ಈಗ ಗ್ರಾಹಕರು 1,349ರೂ. ಗಳ ರಿಯಾಯಿತಿ ಪ್ರೈಸ್‌ ಟ್ಯಾಗ್‌’ನಲ್ಲಿ ಖರೀದಿ ಮಾಡಬಹುದಾಗಿದೆ. ಜೊತೆಗೆ ಬ್ಯಾಂಕ್ ರಿಯಾಯಿತಿ ಸಹ ಲಭ್ಯವಾಗಲಿವೆ. ಇನ್ನುಳಿದಂತೆ ಈ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

ನೋಕಿಯಾ 105 ಪ್ಲಸ್ ಫೀಚರ್ಸ್‌ : ನೋಕಿಯಾ 105 ಫೋನ್ 1.77 ಇಂಚಿನ QQVGA ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್ 4MB RAM ಮತ್ತು 4MB ಸ್ಟೋರೇಜ್‌ ಆಯ್ಕೆ ಅನ್ನು ಪಡೆದಿದೆ. ಹಾಗೆಯೇ 32 GB ವರೆಗಿನ ಮೆಮೊರಿ ಕಾರ್ಡ್ ಅನ್ನು ಬಳಸಿಕೊಂಡು ಈ ಸ್ಟೋರೇಜ್‌ ಅನ್ನು ಸ್ಥಳವನ್ನು ಮತ್ತಷ್ಟು ವಿಸ್ತರಿಸಬಹುದು.

ಪ್ರೊಸೆಸರ್‌ ಮಾಹಿತಿ : ಈ ಫೋನ್ S30+ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಹಾಗೆಯೇ 800 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದರೊಂದಿಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 3.5 mm ಜ್ಯಾಕ್, ಮೈಕ್ರೋ USB ಮತ್ತು 2G ಸಂಪರ್ಕವನ್ನು ಹೊಂದಿದೆ. ಹಾಗೆಯೇ ಹೆಚ್ಚುವರಿ ಫೀಚರ್ಸ್‌ಗಳು ಅಂತರ್ನಿರ್ಮಿತ ಟಾರ್ಚ್ ಮತ್ತು ಕ್ಲಾಸಿಕ್ ಆಟಗಳಿಗೆ ಬೆಂಬಲವನ್ನು ಒಳಗೊಂಡಿವೆ. ಈ ಫೋನ್ ಇದು ಚಾರ್ಕೋಲ್ ಮತ್ತು ಬ್ಲೂ ಬಣ್ಣದ ರೂಪಾಂತರಗಳಲ್ಲಿ ಲಭ್ಯವಿದೆ.

ನೋಕಿಯಾ 105 ಫೀಚರ್ಸ್‌ : ಫೋನ್ 1.77 ಇಂಚಿನ QQVGA ಡಿಸ್‌ಪ್ಲೇ ರಚನೆಯನ್ನು ಹೊಂದಿದೆ. ಹಾಗೆಯೇ ಆಡಿಯೋ ಕರೆ ರೆಕಾರ್ಡಿಂಗ್ ಫೀಚರ್ಸ್‌ ಹೊಂದಿದೆ. ಹಾಗೆಯೇ ಈ ಫೋನ್ ಎಂಪಿ3 ಪ್ಲೇಯರ್‌ ಸೌಲಭ್ಯ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ 1,000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಈ ಫೋನ್ 18 ದಿನಗಳ ಸ್ಟ್ಯಾಂಡ್‌ ಬೈ ಸಮಯವನ್ನು ಮತ್ತು 12 ಗಂಟೆಗಳ ಟಾಕ್‌ಟೈಮ್ ಅನ್ನು ನೀಡುತ್ತದೆ. ಇದು ಚಾರ್ಕೋಲ್ ಮತ್ತು ರೆಡ್ ಬಣ್ಣದ ರೂಪಾಂತರಗಳಲ್ಲಿ ಬರುತ್ತದೆ.

ನೋಕಿಯಾ G21 ಸ್ಮಾರ್ಟ್‌ಫೋನ್‌ ಫೀಚರ್ಸ್‌ : ನೋಕಿಯಾ ಸಂಸ್ಥೆಯು ಫೀಚರ್‌ ಫೋನ್‌ಗಳೊಂದಿಗೆ ನೋಕಿಯಾ G21 ಸ್ಮಾರ್ಟ್‌ಫೋನ್‌ ಸಹ ಜನಪ್ರಿಯವಾಗಿದೆ. ಈ ಫೋನ್ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ ಯುನಿಸೊಕ್ T606 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ನೋಕಿಯಾ G21 ಸ್ಮಾರ್ಟ್‌ಫೋನ್‌ 5,050 mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.