ಮನೆ ರಾಷ್ಟ್ರೀಯ ಚಾರ್ಜ್’ಗೆ ಇಟ್ಟಿದ್ದ ಇ – ರಿಕ್ಷಾ ಬ್ಯಾಟರಿ ಸ್ಫೋಟ: ಮೂವರ ಸಾವು

ಚಾರ್ಜ್’ಗೆ ಇಟ್ಟಿದ್ದ ಇ – ರಿಕ್ಷಾ ಬ್ಯಾಟರಿ ಸ್ಫೋಟ: ಮೂವರ ಸಾವು

0
ಸಾಂದರ್ಭಿಕ ಚಿತ್ರ

ಲಕ್ನೋ:  ಮನೆಯಲ್ಲಿರಿಸಿದ ಇ – ಆಟೋ ರಿಕ್ಷಾದ ಬ್ಯಾಟರಿ ಸ್ಫೋಟಗೊಂಡು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಲಕ್ನೋದಲ್ಲಿ ನಡೆದಿರುವುದು ವರದಿಯಾಗಿದೆ.

Join Our Whatsapp Group

ಗುರುವಾರ ಮುಂಜಾನೆ 5 ಗಂಟೆಗೆ ಬಿಬಿಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಇ-ರಿಕ್ಷಾವೊಂದರ ಬ್ಯಾಟರಿಯು ಓವರ್ ಚಾರ್ಜ್ ನಿಂದಾಗಿ ಸ್ಫೋಟಗೊಂಡಿದೆ ಎಂದು ಪೂರ್ವ ಡಿಸಿಪಿ ಹಿರ್ದೇಶ್ ಕುಮಾರ್ ತಿಳಿಸಿದ್ದಾರೆ.

ಸ್ಫೋಟದ ಶಬ್ದವನ್ನು ಕೇಳಿ ಅಂಕಿತ್ ತನ್ನ ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಅಂಕಿತ್ ಅವರ ಪತ್ನಿ ರೇಣು ಮಗ ಕುಂಜ್, ಸೊಸೆ ರಿಯಾ ಸುಟ್ಟಗಾಯದಿಂದ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ವೇಳೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.