ಮನೆ ದೇವರ ನಾಮ ಸುಮ್ಮನೆ ದೊರಕುವದೆ ಶ್ರೀರಾಮನ

ಸುಮ್ಮನೆ ದೊರಕುವದೆ ಶ್ರೀರಾಮನ

0

ಸುಮ್ಮನೆ ದೊರಕುವದೆ ಶ್ರೀರಾಮನ ದಿವ್ಯನಾಮವು

ಜನ್ಮಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ||

ಕಂತುಪಿತನ ಮೂರುತಿಯ ತನ್ನಂತರಂಗದೊಳಿಟ್ಟು

ಚಿಂತೆ ಎಲ್ಲ ಬಿಟ್ಟು ನಿಶ್ಚಿಂತನಾದವಗಲ್ಲದೆ ||

ಭಕ್ತಿ ರಸದಲ್ಲಿ ತನ್ನು ಚಿತ್ತ ಪರವಶನಾಗಿ

ಅಚ್ಯುತನ ನಾಮವನು ಬಚ್ಚಿಟ್ಟುಕೊಂಡವಗಲ್ಲದೆ ||

ತನ್ನೊಳಗೆ ಇದ್ದ ಮೂರುತಿಯ ಕಣ್ಣೊಳಗೆ ತಂದರೆ

ಆನಂದಪೂರ್ಣ ಪುರಂದರ ವಿಠಲನ ನೋಡಿದಗಲ್ಲದೆ||