ಈ ಯೋಗದ ಭಂಗಿಯ ಹೆಸರೇ ಹೇಳುವಂತೆ ಒಂದು ಉತ್ತಮ ಆಸನವಾಗಿದ್ದು, ಇದು ಹೊಟ್ಟೆಯ ಗಾಳಿಯನ್ನು ಹೊರತರುವಲ್ಲಿ ಒಳ್ಳೆಯ ಆಸನವಾಗಿದೆ
ಪವನ = ಗಾಳಿ, ಮುಕ್ತ = ಬಿಡಿರಿ , ಆಸನ = ವಿನ್ಯಾಸ ಅಥವಾ ಭಂಗಿ
ಪವನಮುಕ್ತಾಸನವನ್ನು ಹೇಗೆ ಮಾಡುವುದು ?
• ನಿಮ್ಮ ಕಾಲುಗಳನ್ನು ಒಟ್ಟಾಗಿಸಿ ನಿಮ್ಮ ಬೆನ್ನಿನ ಮೇಲೆ ಮಲಗಿ ಹಾಗೂ ತೋಳುಗಳನ್ನು ನಿಮ್ಮ ಶರೀರದ ಪಕ್ಕದಲ್ಲಿರಿಸಿ.
• ಉಸಿರನ್ನು ಒಳಗೆ ತೆಗೆದುಕೊಳ್ಳಿ ಮತ್ತು ಉಸಿರನ್ನು ಬಿಡುತ್ತಾ, ನಿಮ್ಮ ಬಲಮಂಡಿಯನ್ನು ನಿಮ್ಮ ಎದೆಯ ಕಡೆಗೆ ತನ್ನಿರಿ ಮತ್ತು ತೊಡೆಯನ್ನು ನಿಮ್ಮ ಹೊಟ್ಟೆಯ ಕಡೆಗೆ ತಂದು ಕೈಗಳಿಂದ ಒತ್ತಿ ಹಿಡಿಯಿರಿ.
• ಪುನ: ಉಸಿರನ್ನು ತೆಗೆದುಕೊಂಡು ಹಾಗೂ ನೀವು ಉಸಿರನ್ನು ಬಿಡುವಾಗ, ನಿಮ್ಮ ತಲೆಯನ್ನು ಎತ್ತಿರಿ ಮತ್ತು ಎದೆಯನ್ನು ನೆಲದ ಮೇಲಿನಿಂದ ಎತ್ತಿ ಮತ್ತು ನಿಮ್ಮ ಗಲ್ಲವನ್ನು ನಿಮ್ಮ ಬಲಮಂಡಿಗೆ ತಾಗಿಸಿ.
• ಇದೇ ಸ್ಥಿತಿಯಲ್ಲಿ ಇದ್ದು ದೀರ್ಘವಾದ ಉಸಿರನ್ನು ಒಳಗೆ ,ಹೊರಗೆ ತೆಗೆದುಕೊಳ್ಳುತ್ತಿರಿ..
• ಗಮನಿಸುವ ಅಂಶ: ಉಸಿರನ್ನು ಬಿಡುವಾಗ ನಿಮ್ಮ ಕೈಗಳಿಂದ ಮಂಡಿಯ ಹಿಡಿತವನ್ನು ಹೆಚ್ಚುಗೊಳಿಸಿ ಮತ್ತು ಎದೆಯ ಮೇಲಿನ ಒತ್ತಡವನ್ನು ಹೆಚ್ಚಿಸಿ. ನೀವು ಉಸಿರನ್ನು ಒಳಗೆ ತೆಗೆದುಕೊಳ್ಳುವಾಗ ಹಿಡಿತವನ್ನು ಕಡಿಮೆಗೊಳಿಸಿ.
• ಉಸಿರನ್ನು ನೀವು ಬಿಡುವಾಗ, ನೆಲದ ಮೇಲೆ ಹಿಂದೆ ಬಂದು ವಿಶ್ರಮಿಸಿ
• ಇದನ್ನೇ ಎಡಕಾಲಿನಲ್ಲೂ ಪನರಾವರ್ತಿಸಿ ಹಾಗೂ ಎರಡೂ ಕಾಲು ಒಟ್ಟಿಗೆ ತಂದು ಇದೇ ರೀತಿ ಮಾಡಿರಿ.
• ನೀವು ಮೇಲೆ ಮತ್ತು ಕೆಳಗೆ ಅಥವಾ ಎಡದಿಂದ ಬಲಕ್ಕೆ ,ಬಲದಿಂದ ಎಡಕ್ಕೆ ಮೂರರಿಂದ ಐದರವರೆವಿಗೂ ನಿಮ್ಮ ಶರೀರವನ್ನು ತೂಗಬಹುದು.
ಪವನಮುಕ್ತಾಸನವು ಪದ್ಮಸಾಧನದ ಒಂದು ಭಾಗವಾಗಿದೆ. ಈ ವಿಶೇಷವಾದ ಯೋಗದ ಭಂಗಿಯನ್ನು ಜೀವನ ಕಲೆಯ ಮೌನದ ಶಿಬಿರದಲ್ಲಿ ಹಾಗೂ ಡಿ ಎಸ್ ಎನ್ ಶಿಬಿರದಲ್ಲಿ ಕಲಿಸಲಾಗುವುದು
ಉಪಯೋಗಗಳು
• ಬೆನ್ನು ಮತ್ತು ಹೊಟ್ಟೆಯ ಮಾಂಸಖಂಡಗಳನ್ನು ಗಟ್ಟಿಯಾಗಿಸುತ್ತದೆ
• ಕಾಲು ಮತ್ತು ತೋಳಿನ ಮಾಂಸಖಂಡಗಳನ್ನು ಒಂದು ಮಟ್ಟದಲ್ಲಿರಿಸುತ್ತದೆ
• ಕರುಳು ಮತ್ತು ಇತರ ಹೊಟ್ಟೆಯ ಭಾಗಗಳನ್ನು ಮಾಲೀಸು ಮಾಡುತ್ತದೆ.
• ಜೀರ್ಣ ಹಾಗೂ ಗಾಳಿಯನ್ನು ಬಿಡುಗಡೆ ಮಾಡಲು ಸಹಾಯವಾಗುತ್ತದೆ
ಪವನಮುಕ್ತಾಸನದಿಂದಾಗುವ ವಿರೋಧತೆಗಳು
• ಈ ಕೆಳಕಂಡ ತೊಂದರೆಗಳಿಂದ ಬಳಲುತ್ತಿದ್ದರೆ ಈ ಪವನಮುಕ್ತಾಸನವನ್ನು ಮಾಡುವುದನ್ನು ನಿರಾಕರಿಸಬೇಕು.
• ಹೆಚ್ಚಿನ ರಕ್ತದೊತ್ತಡ, ಹೃದಯದ ತೊಂದರೆ, ಹೆಚ್ಚಿನ ವಾಯು, ಹರ್ನಿಯಾ, ಬೆನ್ನುಮೂಳೆಯ ಸರಿತ, ವೃಷಣದ ಅಸ್ತವ್ಯಸ್ತತೆ ( ಪುರುಷ ವೀರ್ಯ ಕೋಶ) ಮಾಸಿಕ ರಜಸ್ವಲನ, ಕುತ್ತಿಗೆ ಮತ್ತು ಬೆನ್ನು ನೋವು ಹಾಗೂ ಎರಡು ತಿಂಗಳ ನಂತರದ ಬಸುರಿಯರು.
ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಅಭಿವ್ರುದ್ದಿಯಗುವುದಾದರು ಇದು ನೀವು ತೆಗೆದುಕೊಳ್ಳಲೇಬೇಕಾದ ಔಷದಗಳಿಗೆ ಪರ್ಯಾಯವಲ್ಲ. ಯೋಗದ ಆಸನಗಳನ್ನು/ ಭಂಗಿಗಳನ್ನು ನುರಿತ ಜೀವನ ಕಲಾ ಯೋಗ ತರಬೇತಿದಾರರಿಂದ ಕಲಿತುಕೊಳ್ಳುವ ಅವಶ್ಯಕತೆಯಿದೆ. ಆರೋಗ್ಯ ತೊಂದರೆಗಳಿದ್ದಲ್ಲಿ, ವ್ಯೆದ್ಯರ ಸಲಹೆ ಪಡೆದ ನಂತರ, ಯೋಗ ತರಬೇತಿದಾರರ ನಿಗಾವಣೆಯಲ್ಲಿ ಅಭ್ಯಾಸ ಮಾಡಿ.