ಮನೆ ರಾಜ್ಯ ಕಜಕಿಸ್ತಾನದಿಂದ ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಕರೆ: ದೂರು ನೀಡಲು ನಿರ್ಧಾರ

ಕಜಕಿಸ್ತಾನದಿಂದ ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಕರೆ: ದೂರು ನೀಡಲು ನಿರ್ಧಾರ

0

ಶಿವಮೊಗ್ಗ: ಕಜಕಿಸ್ತಾನದಿಂದ ವಿದೇಶಿ ವ್ಯಕ್ತಿಯೊಬ್ಬ ಮಧ್ಯರಾತ್ರಿ ನನಗೆ ಮಿಸ್ಡ್​​​ ಕಾಲ್​ ಮಾಡಿ ಬೆದರಿಕೆ ಹಾಕಿರುವುದಾಗಿ ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ ತಿಳಿಸಿದ್ದಾರೆ.

Join Our Whatsapp Group

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ (ಭಾನುವಾರ) ರಾತ್ರಿ 12:30 ಗಂಟೆಗೆ ಕಜಕಿಸ್ತಾನದಿಂದ ನನಗೆ ಬೆದರಿಕೆ ಬಂದಿದೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ‌‌ ನೀಡಲಿದ್ದೇನೆ ಎಂದಿದ್ದಾರೆ.

+7(678)815-46-5 ಈ ನಂಬರ್’​ನಿಂದ ಮಿಸ್ಡ್​​ ಕಾಲ್ ಬಂದಿದೆ. ಹಾಗಾಗಿ ಕಾನೂನು ಪ್ರಕಾರ ಸಂಬಂಧಪಟ್ಟ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಲಿರುವೆ ಎಂದು ಅವರು ತಿಳಿಸಿದ್ದಾರೆ.