ಮನೆ ಕಾನೂನು ನಟ ಸಲ್ಮಾನ್ ಖಾನ್ ವಿರುದ್ಧದ ಆರೋಪ ನಿಜ: ಮುಂಬೈ ಸಿವಿಲ್ ಕೋರ್ಟ್

ನಟ ಸಲ್ಮಾನ್ ಖಾನ್ ವಿರುದ್ಧದ ಆರೋಪ ನಿಜ: ಮುಂಬೈ ಸಿವಿಲ್ ಕೋರ್ಟ್

0

ಮುಂಬೈ: ಪನ್ವೇಲ್ ಫಾರ್ಮ್‌ಹೌಸ್ ನೆರೆಹೊರೆಯವರೊಂದಿಗಿನ ವಾದವು ನಟ ಸಲ್ಮಾನ್​ ಖಾನ್​ನನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದ್ದು, ಸಲ್ಮಾನ್ ವಿರುದ್ಧ ನೆರೆಯ ಕೇತನ್ ಕಕ್ಕಡ್ ಭೂಮಿಗೆ ಸಂಬಂಧಿಸಿದಂತೆ ಮಾಡಿರುವ ಆರೋಪ ನಿಜವೆಂದು ಮುಂಬೈನ ಸಿವಿಲ್ ಕೋರ್ಟ್ ಒಪ್ಪಿಕೊಂಡಿದೆ.

ಕೇತನ್ ಕಕ್ಕಡ್ ಅವರ ಯಾವುದೇ ಆರೋಪಗಳು ಸುಳ್ಳಲ್ಲ. ಹಾಗಾಗಿ ನೆರೆಹೊರೆಯವರ ವಿರುದ್ಧ ಸಲ್ಮಾನ್ ಮಾಡಿದ್ದ ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್ ರದ್ದುಗೊಳಿಸಿದೆ.

ಜಮೀನಿಗೆ ಬರದಂತೆ ಕೇತನ್​ನನ್ನು ಸಲ್ಮಾನ್ ಖಾನ್ ತಡೆದಿದ್ದರು. ಸ್ವಂತ ಜಮೀನಿಗೆ ತೆರಳಲು ಸಾಧ್ಯವಾಗದ ಹಿನ್ನೆಲೆ ಕೇತನ್​ ನಟನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದರು. ಕೇವಲ ನನಗೆ ಮಾನಹಾನಿ ಮಾಡಲು ಈ ಆರೋಪ ಮಾಡಲಾಗುತ್ತಿದೆ ಎಂದು ಕೇತನ್​ ವಿರುದ್ಧ ಸಲ್ಮಾನ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಆದರೆ, ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಸಲ್ಮಾನ್ ವಿರುದ್ಧ ಕೇತನ್ ಮಾಡಿರುವ ಆರೋಪಗಳೆಲ್ಲವೂ ನಿಜವಾಗಿದೆ. ಅವರು ಸಲ್ಲಿಸಿದ ಸಾಕ್ಷ್ಯಗಳನ್ನು ಆಧರಿಸಲಾಗಿದೆ ಎಂದು ಮುಂಬೈ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎ.ಎಚ್.ಲಡ್ಡಾದ್ ಆದೇಶಿಸಿದ್ದಾರೆ.

ಸಲ್ಮಾನ್ ಖಾನ್ ಕೋರ್ಟ್​ನಲ್ಲಿ ತಮ್ಮ ವಾದವನ್ನು ಮಂಡಿಸಲು ಮತ್ತು ಸಾಕ್ಷ್ಯಾಧರಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಆ ಜಮೀನು ಸಲ್ಮಾನ್​ಗೆ ಸೇರಿದ್ದು ಎಂಬುದನ್ನು ಸಾಬೀತುಪಡಿಸಲು ನಟನಿಗೆ ಸಾಧ್ಯವಾಗಲಿಲ್ಲ. ಕಕ್ಕಡ್ ನೀಡಿರುವ ಸಾಕ್ಷ್ಯವು ನಿಜವಾಗಿದ್ದು, ನ್ಯಾಯಾಲಯ ಅವರ ಸಾಕ್ಷ್ಯಿಗಳನ್ನು ಪರಿಗಣಿಸುತ್ತದೆ. ಸಲ್ಮಾನ್ ತಮ್ಮ ನೆರೆಯವನಾದ ಕೇತನ್ ಕಕ್ಕಡ್ ವಿರುದ್ಧ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ರದ್ದುಗೊಳಿಸಿದೆ