ಮನೆ ದೇವರ ನಾಮ ಸತತ ಮಾರ್ಗದಿ  ಸಂತತ

ಸತತ ಮಾರ್ಗದಿ  ಸಂತತ

0

ಸತತ ಮಾರ್ಗದಿ  ಸಂತತ ಸೇವಿಪರಿಗೆ । ಅತಿ

ಹಿತದಲಿ ಮನೋರಥವ ಕೊಡುವೆನೆಂದು ।।ಪ ।।

ರಥವಾನೇರಿದ  ರಾಘವೇಂದ್ರ । ಸದ್ಗುಣಗಳ ಸಾಂದ್ರ  ।।ಅ.ಪ ।।

ಚತುರ ದಿಕ್ಕು ವಿದಿಕ್ಕುಗಳಲ್ಲಿ । ಹರಿವೋ ಜನರಲ್ಲಿ

ಮಿತಿಯಿಲ್ಲದೆ ಬಂದು ಓಲೈಸುತಲಿ । ವರವಾ  ಬೇಡುತಲಿ |ನುತಿಸುತ ಪರಿಪರಿ ನತರಾಗಿ ಹರಿಗೆ

ಗತಿ ಪೇಳದೆ  ಸರ್ವಥಾ  ನಾ ಬಿಡೆನೆಂದು  ।।೧।।

ಅತುಳ  ಮಹಿಮಾನಾ ದಿನದಲ್ಲಿ ।ದಿತಿಜಾ ವಂಶದಲಿ

ಉತ್ಪತ್ತಿಯಾಗಿ ಉಚಿತದಲ್ಲಿ । ಉತ್ತಮ ರೀತಿಯಲ್ಲಿ

ಅತಿಶಯವಿರುತಿರೆ  ಪಿತನ ಬಾಧೆಗಳು

ಮನ್ಮಥ  ಪಿತನೊಲಿಸಿದ  ಜಿತ ಕರುಣದಲಿ ।।೨।।

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ । ಯತಿರಾಘವೇಂದ್ರ ….  ಗುರುರಾಘವೇಂದ್ರ

ಪತೀತರೋದ್ಧಾರಿಯೇ  ಪಾವನಕಾರಿಯೇ ।ಕರಮುಗಿವೆನು  ದೊರೆಯೆ

ಕ್ಷಿತಿಯೊಳು  ಗೋಪಾಲವಿಠಲನ  ಸ್ಮರಿಸುತ ……. ವಿಠಲ …. ಗೋಪಾಲವಿಠಲ

ಪ್ರತಿ  ಮಂತ್ರಾಲಯದೊಳು   ಅತಿ  ಮೆರೆವ   ।।೩।।