ಮನೆ ಮನರಂಜನೆ 64ನೇ ಗ್ರ್ಯಾಮಿ ಅವಾರ್ಡ್: ಭಾರತದ ರಿಕ್ಕಿ ಕೇಜ್ ಗೆ ಪ್ರಶಸ್ತಿ

64ನೇ ಗ್ರ್ಯಾಮಿ ಅವಾರ್ಡ್: ಭಾರತದ ರಿಕ್ಕಿ ಕೇಜ್ ಗೆ ಪ್ರಶಸ್ತಿ

0

64ನೇ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮ ಲಾಸ್​ ವೇಗಸ್​ನಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ಭಾರತದ ಮ್ಯೂಸಿಕ್​ ಕಂಪೋಸರ್​ ರಿಕ್ಕಿ ಕೇಜ್ ಅವರಿಗೆ ಪ್ರಶಸ್ತಿ ದೊರೆತಿದೆ.

ವೇದಿಕೆ ಏರಿದ ರಿಕ್ಕಿ ಕೇಜ್​ ಅವರು ‘ನಮಸ್ತೆ’ ಎಂದು ಹೇಳುವ ಮೂಲಕ ಭಾರತದ ಸಂಸ್ಕೃತಿಯನ್ನು ಅಲ್ಲಿಯೂ ಪಸರಿಸಿದರು.

ರಿಕ್ಕಿ ಕೇಜ್​ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕ್ಕಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು 100ಕ್ಕೂ ಅಧಿಕ ಪಶಸ್ತಿಗಳನ್ನು ಗೆದ್ದಿದ್ದಾರೆ. 2015ರಲ್ಲಿ ‘ವಿಂಡ್ಸ್​ ಆಫ್​ ಸಂಸಾರ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಈ ಬಾರಿ ‘ಡಿವೈನ್​ ಟೈಡ್ಸ್​’ ಆಲ್ಬಂಗೆ ಸ್ಟೀವರ್ಟ್ ಕೋಪ್​​ಲ್ಯಾಂಡ್​ ಹಾಗೂ ರಿಕ್ಕಿ ಕೇಜ್​ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಈ ಮೂಲಕ ಅವರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅಮೆರಿಕದ ಸಿಂಗರ್ ಒಲಿವಿಯಾ ರೋಡ್ರಿಗೊ ಅವರಿಗೆ ಈ ಬಾರಿಯ ಗ್ರ್ಯಾಮಿ ಅವಾರ್ಡ್​ ಕಾರ್ಯಕ್ರಮದಲ್ಲಿ ಮೂರು ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿದ್ದು ವಿಶೇಷವಾಗಿತ್ತು.

ಪ್ರಶಸ್ತಿ ಪಡೆದವರ ಪಟ್ಟಿ

ಆಲ್ಬಂ ಆಫ್​ ದಿ ಇಯರ್: ‘ವಿ ಆರ್​’- ಜಾನ್​ ಬಾಟಿಸ್ಟ್​

ಸಾಂಗ್​ ಆಫ್​ ದಿ ಇಯರ್: ಸಿಲ್ಕ್​ ಸೋನಿಕ್​- ಲೀವ್​ ದಿ ಡೋರ್​ ಓಪನ್

ಬೆಸ್ಟ್ ನ್ಯೂ ಆರ್ಟಿಸ್ಟ್​: ಒಲಿವಿಯಾ ರೋಡ್ರಿಗೊ

ಅತ್ಯುತ್ತಮ ಪಾಪ್​ ಸೋಲೋ ಪರ್ಫಾರ್ಮೆನ್ಸ್​: ಒಲಿವಿಯಾ ರೋಡ್ರಿಗೊ -‘ಡ್ರೈವರ್​ ಲೈಸೆನ್ಸ್​’

ಅತ್ಯುತ್ತಮ ಪಾಪ್​ ವೋಕಲ್​ ಆಲ್ಬಂ: ಒಲಿವಿಯಾ ರೋಡ್ರಿಗೊ- ಸಾವರ್

ಅತ್ಯುತ್ತಮ ರಾಕ್​ ಪರ್ಫಾರ್ಮೆನ್ಸ್​: ಫೂ ಫೈಟರ್ಸ್​- ಮೇಕಿಂಗ್​ ಎ ಫೈರ್​

ಅತ್ಯುತ್ತಮ ರಾಕ್​ ಸಾಂಗ್: ಫೂ ಫೈಟರ್ಸ್​-ವೇಟಿಂಗ್​ ಆನ್​ ಎ ವಾರ್

ಅತ್ಯುತ್ತಮ ರ‍್ಯಾಪ್ ಆಲ್ಬಂ: ಟೈಲರ್, ದಿ ಕ್ರಿಯೇಟರ್​ ಕಾಲ್​ ಮಿ ಇಫ್​ ಯು ಗೆಟ್ ಲಾಸ್ಟ್​

ಬೆಸ್ಟ್​ ನ್ಯೂ ಏಜ್​ ಆಲ್ಬಂ: ಸ್ಟೀವರ್ಟ್ ಕೋಪ್​ಲ್ಯಾಂಡ್, ರಿಕ್ಕಿ ಕೇಜ್​, ಡಿವೈನ್​ ಟೈಡ್ಸ್​