ಮನೆ ಸುದ್ದಿ ಜಾಲ ಹಾವೇರಿ: ಸಾರಿಗೆ ಬಸ್’ನಿಂದ ಬಿದ್ದು ವಿದ್ಯಾರ್ಥಿನಿ ಸಾವು

ಹಾವೇರಿ: ಸಾರಿಗೆ ಬಸ್’ನಿಂದ ಬಿದ್ದು ವಿದ್ಯಾರ್ಥಿನಿ ಸಾವು

0

ಹಾವೇರಿ: ಸಾರಿಗೆ ಬಸ್‍ ನಿಂದ ಬಿದ್ದು 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯ ಹಾನಗಲ್ಲ ತಾಲೂಕಿನ ಕುಸನೂರು ಗ್ರಾಮದ ಬಳಿ ಸೋಮವಾರ ನಡೆದಿದೆ.

Join Our Whatsapp Group

ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ 14 ವರ್ಷದ ಮಧು ಕುಂಬಾರ ಮೃತಪಟ್ಟ ಬಾಲಕಿ.

ಹಾ‌ನಗಲ್ಲ ತಾಲೂಕಿನ ವಾಸನ ಗ್ರಾಮದಿಂದ ಕುಸನೂರು ಗ್ರಾಮದ ಪ್ರೌಢಶಾಲೆಗೆ ಬಸ್ ನಲ್ಲಿ ಆಗಮಿಸುತ್ತಿದ್ದಳು. ಬಸ್ ತುಂಬಾ ರಶ್​​​ ಇರುವ ಕಾರಣಕ್ಕಾಗಿ ಬಾಗಿಲ ಬಳಿಯೇ ನಿಂತಿದ್ದಳು. ಈ ವೇಳೆ ಬಾಲಕಿ ಆಯ ತಪ್ಪಿ ಕೆಳಗೆ ಬಿದ್ದ ಪರಿಣಾಮ ಮೃತಪಟ್ಟಿದ್ದಾಳೆ.

ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.