ಮನೆ ಕ್ರೀಡೆ ನಿಶ್ಚಿತಾರ್ಥ ಮಾಡಿಕೊಂಡ CSK ವೇಗಿ ತುಷಾರ್ ದೇಶಪಾಂಡೆ

ನಿಶ್ಚಿತಾರ್ಥ ಮಾಡಿಕೊಂಡ CSK ವೇಗಿ ತುಷಾರ್ ದೇಶಪಾಂಡೆ

0

ನವ ದೆಹಲಿ: ತುಷಾರ್ ದೇಶಪಾಂಡೆ ತಮ್ಮ ಬಾಲ್ಯದ ಗೆಳತಿ ನಭಾ ಗಡ್ಡಂವಾರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Join Our Whatsapp Group

ಶಾಲಾ ದಿನ ಗಳಿಂದಲೂ ಜೊತೆಯಾಗಿದ್ದ ತುಷಾರ್ಗೆ ಮೊದಲೇ ನಭಾ ಮೇಲೆ ಪ್ರೀತಿ ಇತ್ತು. ಇದೀಗ ಬಾಲ್ಯದ ಗೆಳತಿಯನ್ನೇ ತಮ್ಮ ಬಳ ಸಂಗಾತಿ ಯನ್ನಾಗಿಸಲು ನಿರ್ಧರಿಸಿದ್ದಾರೆ.

ಅದರಂತೆ ನಭಾ ಗಡ್ಡಂವಾರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೋಟೋಗಳನ್ನು ತುಷಾರ್ ದೇಶಪಾಂಡೆ ಸೋಷಿಯಲ್ ಮೀಡಿಯಾದಲ್ಲಿಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ನಿಶ್ಚಿತಾರ್ಥದ ಫೋಟೋದಲ್ಲೂ ಸಿ ಎಸ್ ಕೆ ವೇಗಿ ತನ್ನ ಸಂಗಾತಿ ಜೊತೆ ರೆಡ್ ಬಾಲ್ ಹಿಡಿದು ಫೋಟೋ ಗೆ ಪೋಸ್ ನೀಡಿದ್ದಾರೆ. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಿ ಎಸ್ ಕೆ ತಂಡದ ಆಟಗಾರ ಶಿವಂ ದುಬೆ ಅಭಿನಂದನೆ ಸಲ್ಲಿಸಿದ್ದಾರೆ .