ಮನೆ ಮನರಂಜನೆ ಹೊಸ ಫೋಟೋ ಹಂಚಿಕೊಂಡ ನಟಿ ಸಮಂತಾ

ಹೊಸ ಫೋಟೋ ಹಂಚಿಕೊಂಡ ನಟಿ ಸಮಂತಾ

0

ಹೈದರಾಬಾದ್(Hydarabad): ಬಹುಭಾಷಾ ನಟಿ(Actor) ಸಮಂತಾ ರುತ್ ಪ್ರಭು(Samantha ruth prabhu) ಅವರು ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಹೊಸ ಫೋಟೊ(Photo)ವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಳದಿ ಬಣ್ಣ ಉಡುಪು ಧರಿಸಿ, ಗಾಢ ಅಲೋಚನೆಯಲ್ಲಿರುವಂತಹ ನೋಟ ಬೀರಿರುವ ಫೋಟೊವನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಂ(Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೇಸಿಗೆ ಕಾಲವಾದ್ದರಿಂದ ತೆಳ್ಳಗಿನ ಉಡುಪು ಧರಿಸಿರುವ ಅವರು ಸೂರ್ಯಕಾಂತಿ ಎಮೋಜಿಯೊಂದಿಗೆ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರಕ್ಕೆ ಸಮಂತಾ ಅವರ ವಿಚ್ಛೇದಿತ ಪತಿ ನಾಗ ಚೈತನ್ಯ ಅವರ ಸೋದರ ಸಂಬಂಧಿ ಆಶ್ರಿತಾ ದಗ್ಗುಬಾಟಿ(Ashritha Daggubati) ಕೂಡ ಹೃದಯ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ.

ಸಮಂತಾಗೆ ದೊಡ್ಡ ಅಭಿಮಾನಿ ಬಳಗವಿದೆ. ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡುವ ಅವರು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಗುಣಶೇಖರ್ ನಿರ್ದೇಶನದ ‘ಶಾಕುಂತಲಂ’ (Shakuntalam)ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ, ಫಿಲಿಪ್‌ ಜಾನ್‌(pilip john) ನಿರ್ದೇಶನದ ‘ಅರೆಂಜ್‌ಮೆಂಟ್ಸ್‌ ಆಫ್ ಲವ್’(Arrangements of love) ಎಂಬ ಹಾಲಿವುಡ್‌(Hollywood) ಚಿತ್ರದಲ್ಲಿ ಸಮಂತಾ ಅಭಿನಯಿಸಲಿದ್ದಾರೆ.