ಮನೆ ಕ್ರೀಡೆ ವಿಶ್ವ ಚಾಂಪಿಯನ್‌ಶಿಪ್‌’ಗೆ ಅರ್ಹತೆಗಳಿಸಿದ ಶ್ರೀಕುಮಾರ್‌

ವಿಶ್ವ ಚಾಂಪಿಯನ್‌ಶಿಪ್‌’ಗೆ ಅರ್ಹತೆಗಳಿಸಿದ ಶ್ರೀಕುಮಾರ್‌

0

ಭುವನೇಶ್ವರ: ಸ್ಟಾರ್‌ ಲಾಂಗ್‌ ಜಂಪರ್‌ ಮುರಳಿ ಶ್ರೀಶಂಕರ್‌ ರಾಷ್ಟ್ರೀಯ ಅಂತಾರಾಜ್ಯ ಆಥ್ಲೆಟಿಕ್‌ ಕೂಟದ ಅರ್ಹತಾ ಸುತ್ತಿನಲ್ಲಿ ಅಮೋಘ ಸಾಧನೆ ದಾಖಲಿಸಿ ವಿಶ್ವ ಚಾಂಪಿಯನ್‌ಶಿಪ್‌ ಗೆ ಅರ್ಹತೆ ಗಳಿಸಿಕೊಂಡಿದ್ದಾರೆ.

Join Our Whatsapp Group

ಹಂಗೇರಿಯ ಬುದಾಪೆಸ್ಟ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ನ ಲಾಂಗ್‌ ಜಂಪ್‌ನಲ್ಲಿ ಸ್ಪರ್ಧಿಸಲು 8.25 ಮೀ. ಅರ್ಹತಾ ಮಟ್ಟವಾಗಿದ್ದು ಶ್ರೀಕುಮಾರ್‌ ಇದನ್ನು ಸಾಧಿಸಿ ಗಮನ ಸೆಳೆದಿದ್ದಾರೆ.

ತನ್ನ ಮೊದಲ ಪ್ರಯತ್ನದಲ್ಲಿಯೇ 8.41 ಮೀ. ದೂರ ದೂರ ಹಾರಿದ 24ರ ಹರೆಯದ ಶ್ರೀಕುಮಾರ್‌ ಅವರು ಈ ವರ್ಷದ ಆರಂಭದಲ್ಲಿ ಜೆಸ್ವಿನ್‌ ಅಲ್ಡಿ†ನ್‌ ಅವರು ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಅಳಿಸಿ ಹಾಕಲು ಸ್ವಲ್ಪದರಲ್ಲಿ ತಪ್ಪಿಸಿಕೊಂಡರು. ಆದರೆ ಇದು ಶ್ರೀಕುಮಾರ್‌ ಅವರ ವೈಯಕ್ತಿಯ ಶ್ರೇಷ್ಠ ಸಾಧನೆಯಾಗಿದೆ. ಆಲ್ಡಿನ್‌ ಅವರು 8.42 ಮೀ. ಹಾರಿ ದಾಖಲೆ ನಿರ್ಮಿಸಿದ್ದರು.

ಗಾಳಿಯ ವೇಗ ಉತ್ತಮವಾಗಿತ್ತು. ರಾಷ್ಟ್ರೀಯ ದಾಖಲೆ ನಿರ್ಮಿಸಲು ಸ್ವಲ್ಪದರಲ್ಲಿ ಮಿಸ್‌ ಆಯಿತು. ಆದರೂ ಈ ಪ್ರಯತ್ನದಿಂದ ನನಗೆ ಸಂತೋಷವಾಗಿದೆ ಎಂದು ಕೇರಳವನ್ನು ಪ್ರತಿನಿಧಿಸುತ್ತಿರುವ ಶ್ರೀಕುಮಾರ್‌ ಹೇಳಿದರು.

7.83 ಮೀ. ದೂರ ಹಾರಿದ ಅಲ್ಡಿ†ನ್‌ ದ್ವಿತೀಯ ಮತ್ತು ಮುಹಮ್ಮದ್‌ ಅನೀಸ್‌ ಯಾಹಿಯಾ (7.71 ಮೀ.) 3ನೇ ಸ್ಥಾನ ಪಡೆದರು. ಒಟ್ಟಾರೆ 12 ಮಂದಿ ಸೋಮ ವಾರ ನಡೆಯುವ ಫೈನಲ್‌ನಲ್ಲಿ ಸ್ಪರ್ಧಿಸಲು ಅವಕಾಶ ಪಡೆದರು. ಪುರುಷರ ಲಾಂಗ್‌ಜಂಪ್‌ನಲ್ಲಿ ಏಷ್ಯನ್‌ ಗೇಮ್ಸ್‌ ಅರ್ಹತಾ ಮಟ್ಟ 7.95 ಮೀ. ಆಗಿದೆ.