ಬಾರೆ ವೆಂಕಟರಮಣಿ ಶ್ರೀ ಶ್ರೀದೇವಿ ನೀ ಬಾರೆ ವೆಂಕಟರಮಣಿ ||ಪ||
ಬಾರೆ ವೆಂಕಟರಮಣಿ ಪಾರಾಯಣ ಕೇಳು ಚಾರು ವದನೆ ಉಪಹಾರ ಕಾಲಕ್ಕೆ ನಿತ್ಯ ||ಅ.ಪ||
ಏನು ಪುಣ್ಯವೆ ನಂದು ಪಾರಾಯಣ ನೀನು ಕೇಳುವಿ ಬಂದು
ಹೀನ ಮಾನವನಿಗೆ ನೀನು ಬರುವಿ ಎಂಬೊ ಜ್ಞಾನವಿಲ್ಲದೆ ಉಚ್ಚ ಸ್ಥಾನದೊಳಗೆ ಬಾರೆ ||
ಸ್ವಪ್ನದೊಳಗೆ ಬರುವಿ ಶ್ರೀದೇವಿ ನೀ ಕ್ಷಿಪ್ರದಿಂದಲಿ ಪೋಗುವಿ
ಸರ್ಪಶಯನ ನಮ್ಮಪ್ಪ ಗೋಕುಲ ಬಾಲ ಅಪ್ಪಿಕೊಳ್ಳುವ ಸುಖ ಒಪ್ಪಿಸಬೇಕಮ್ಮ ||
ಮಂಗಳಾಂಗಿಯೇ ನಿನ್ನ ನೋಡದೆ ಬಲು ಭಂಗಪಡುವೆನಮ್ಮ
ಗಂಗಜನಕ ಸಿರಿ ರಂಗನಂಕದಿ ಕೂತು ಭೃಂಗಕುಂತಳೆ ಹೃದಯಂಗಳದೊಳಗಾಡೆ ||
ಎಲ್ಲ ದೇವತೆಗಳನೆ ತಪಾದಿಯೆಪುಲ್ಲ ವಾರಿಜನಯನೆ
ಗೊಲ್ಲ ಬಾಲನ ಪಾದ ಪಲ್ಲವ ನೋಡದೆ ನಿಲ್ಲಲೊಲ್ಲದು ಮನಸೊಲ್ಲು ಲಾಲಿಸೆ ತಾಯೆ||
ಇಂದಿರೇಶನ ರಾಣಿ ಎನ್ನಯ ಮನೋ-ಮಂದಿರದೊಳು ಬಾ ನೀ
ನಂದಗೋಕುಲ ಬಾಲಾನಿಂದು ಕರದೊಳೆತ್ತಿತಂದು ತೋರಿಸೆ ಅರವಿಂದ ನಿಲಯೆ ಲಕ್ಷ್ಮಿ||