ವಿವೋ ಒಡೆತನದ ಹೊಸ ಐಕ್ಯೂ ನಿಯೋ 7 ಪ್ರೊ (iQOO Neo) ಸ್ಮಾರ್ಟ್ ಫೋನ್ ಇದೀಗ ದೇಶದಲ್ಲಿ ಬಿಡುಗಡೆ ಆಗಿದೆ.
ಈ ಸ್ಮಾರ್ಟ್ ಫೋನ್ ನಲಲ್ಇ ಸ್ನಾಪ್ ಡ್ರಾಗನ್ 8+ ಜೆನ್ 1 ಪ್ರೊಸೆಸರ್ ಅಳವಡಿಸಲಾಗಿದೆ. ಐಕ್ಯೂ ನಿಯೋ 7 ಸರಣಿಯ ಮುಂದುವರೆದ ಭಾಗವಾಗಿದೆ.
ಬೆಲೆ ಎಷ್ಟು?:
ಐಕ್ಯೂ ನಿಯೋ 7 ಪ್ರೊ ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 12GB ಸ್ಟೋರೇಜ್ ಆಯ್ಕೆಗೆ 34,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 128GB RAM + 256GB ವೇರಿಯೆಂಟ್ ಗೆ 37,999 ರೂ. ಇದೆ. ಇದು ಫಿಯರ್ ಲೆಸ್ ಫ್ಲೇಮ್ ಮತ್ತು ಡಾರ್ಕ್ ಸ್ಟೋರ್ಮ್ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಫೋನ್ ಜುಲೈ 15, 16 ಅಮೆಜಾನ್ ಪ್ರೈಮ್ ಡೇ ಸೇಲ್ನಂದು ಮಾರಾಟ ಕಾಣಲಿದೆ. ಮೊದಲ ಸೇಲ್ ಪ್ರಯುಕ್ತ ಮೂಲಬೆಲೆಯಲ್ಲಿ ರಿಯಾಯಿತಿ, ಬ್ಯಾಂಕ್ ಆಫರ್ ಗಳೆಲ್ಲ ಲಭ್ಯವಿರಲಿದೆ.
ಫೀಚರ್ಸ್ ಏನಿದೆ?:
ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್ ಫೋನ್ 2400×1080 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.78 ಇಂಚಿನ ಅಮೋಲೆಡ್ ಡಿಸ್ ಪ್ಲೇ ನೀಡಲಾಗಿದ್ದು, 120Hz ರಿಫ್ರೆಶ್ ರೇಟ್ ಹೊಂದಿದೆ. ಇದರಿಂದ ಸ್ಮಾರ್ಟ್ ಫೋನ್ ಡಿಸ್ ಪ್ಲೇ ನಯವಾಗಿ ಇರಲಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 8+ ಜೆನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 13 ಒಎಸ್ ನೀಡಲಾಗಿದೆ.
ಈ ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಟೆಕ್ನಾಲಜಿ ಜೊತೆಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್ ನ ವೈಡ್-ಆ್ಯಂಗಲ್ ಲೆನ್ಸ್ ಮತ್ತು ಎರಡು ಮೆಗಾ ಪಿಕ್ಸೆಲ್ ನ ಮಾಕ್ರೊ ಲೆನ್ಸ್ ಅಳವಡಿಸಲಾಗಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸೆಲ್ನ ಹೈ-ಕ್ವಾಲಿಟಿ ಲೆನ್ಸ್ ನೀಡಲಾಗಿದೆ. ಕ್ಯಾಮೆರಾದಲ್ಲಿ ಸ್ಪೋರ್ಟ್ಸ್, ನೈಟ್, ಪೋಟ್ರೆಟ್ ಸೇರಿದಂತೆ ಫೋಟೋಗ್ರಫಿಗಾಗಿ ಅನೇಕ ಆಯ್ಕೆ ಸೇರಿಸಲಾಗಿದೆ.
120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAhಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಕಂಪನಿ ಹೇಳಿರುವ ಪ್ರಕಾರ ಇದು ಶೇ. 1 ರಿಂದ ಶೇ. 100 ರಷ್ಟು ಚಾರ್ಜ್ ಕೇವಲ 25 ನಿಮಿಷಗಳಲ್ಲಿ ಆಗುತ್ತಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಸಪೋರ್ಟ್ ಮಾಡಲಿದೆ. ಉಳಿದಂತೆ 4G LTE, Wi-Fi 6, ಬ್ಲೂಟೂತ್ v5.2 ಮತ್ತು USB ಟೈಪ್-C ಪೋರ್ಟ್ ನೀಡಲಾಗಿದೆ. ಇದರಲ್ಲಿ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆಗಳನ್ನು ಅಳವಡಿಸಲಾಗಿದೆ.
ಹ್ಯಾಪಿ ಮದರ್ಸ್ ಡೇ…….
ಹ್ಯಾಪಿ ಮದರ್ಸ್ ಡೇ…..
ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾರಾಟದಲ್ಲಿ ಹೊಸ ದಾಖಲೆ..!
ಹೆಚ್ಚು ಹೊತ್ತು ಮೆಟ್ರೋದಲ್ಲಿ ಇದ್ದ ಕಾರಣ ದಂಡ ವಿಧಿಸಲಾಗಿದೆ…
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
ಜೈಲಿನಲ್ಲಿರುವವರು ಮತ ಚಲಾಯಿಸಬಹುದೇ ?
ಉದ್ಯೋಗ ಅವಕಾಶ, ಆನ್ಲೈನಲ್ಲಿ ಅರ್ಜಿ ಸಲ್ಲಿಸಿ….
ಯಾಕೆ ಮೇ 8ನ್ನ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ
ಬೆಂಗಳೂರಿನಲ್ಲಿ ಭೂಕುಸಿತ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.