ಮನೆ ತಂತ್ರಜ್ಞಾನ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ ಫೋನ್

ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ ಫೋನ್

0

ವಿವೋ ಒಡೆತನದ ಹೊಸ ಐಕ್ಯೂ ನಿಯೋ 7 ಪ್ರೊ (iQOO Neo) ಸ್ಮಾರ್ಟ್​ ಫೋನ್ ಇದೀಗ ದೇಶದಲ್ಲಿ ಬಿಡುಗಡೆ ಆಗಿದೆ.

Join Our Whatsapp Group

ಈ ಸ್ಮಾರ್ಟ್ ಫೋನ್ ನಲಲ್ಇ ಸ್ನಾಪ್​ ಡ್ರಾಗನ್ 8+ ಜೆನ್‌ 1 ಪ್ರೊಸೆಸರ್ ಅಳವಡಿಸಲಾಗಿದೆ. ಐಕ್ಯೂ ನಿಯೋ 7 ಸರಣಿಯ ಮುಂದುವರೆದ ಭಾಗವಾಗಿದೆ.

ಬೆಲೆ ಎಷ್ಟು?:

ಐಕ್ಯೂ ನಿಯೋ 7 ಪ್ರೊ ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 12GB ಸ್ಟೋರೇಜ್ ಆಯ್ಕೆಗೆ 34,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 128GB RAM + 256GB ವೇರಿಯೆಂಟ್ ​ಗೆ 37,999 ರೂ. ಇದೆ. ಇದು ಫಿಯರ್ ​ಲೆಸ್ ಫ್ಲೇಮ್ ಮತ್ತು ಡಾರ್ಕ್ ಸ್ಟೋರ್ಮ್ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಫೋನ್ ಜುಲೈ 15, 16 ಅಮೆಜಾನ್ ಪ್ರೈಮ್ ಡೇ ಸೇಲ್​ನಂದು ಮಾರಾಟ ಕಾಣಲಿದೆ. ಮೊದಲ ಸೇಲ್ ಪ್ರಯುಕ್ತ ಮೂಲಬೆಲೆಯಲ್ಲಿ ರಿಯಾಯಿತಿ, ಬ್ಯಾಂಕ್ ಆಫರ್ ​ಗಳೆಲ್ಲ ಲಭ್ಯವಿರಲಿದೆ.

ಫೀಚರ್ಸ್ ಏನಿದೆ?:

ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ ಫೋನ್‌ 2400×1080 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.78 ಇಂಚಿನ ಅಮೋಲೆಡ್‌ ಡಿಸ್‌ ಪ್ಲೇ ನೀಡಲಾಗಿದ್ದು, 120Hz ರಿಫ್ರೆಶ್ ರೇಟ್‌ ಹೊಂದಿದೆ. ಇದರಿಂದ ಸ್ಮಾರ್ಟ್ ​ಫೋನ್ ಡಿಸ್ ಪ್ಲೇ ನಯವಾಗಿ ಇರಲಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 8+ ಜೆನ್‌ 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 13 ಒಎಸ್ ನೀಡಲಾಗಿದೆ.

ಈ ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಟೆಕ್ನಾಲಜಿ ಜೊತೆಗೆ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್ ​ನ ವೈಡ್-ಆ್ಯಂಗಲ್ ಲೆನ್ಸ್ ಮತ್ತು ಎರಡು ಮೆಗಾ ಪಿಕ್ಸೆಲ್ ​ನ ಮಾಕ್ರೊ ಲೆನ್ಸ್ ಅಳವಡಿಸಲಾಗಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16 ಮೆಗಾ ಪಿಕ್ಸೆಲ್​ನ ಹೈ-ಕ್ವಾಲಿಟಿ ಲೆನ್ಸ್ ನೀಡಲಾಗಿದೆ. ಕ್ಯಾಮೆರಾದಲ್ಲಿ ಸ್ಪೋರ್ಟ್ಸ್, ನೈಟ್, ಪೋಟ್ರೆಟ್ ಸೇರಿದಂತೆ ಫೋಟೋಗ್ರಫಿಗಾಗಿ ಅನೇಕ ಆಯ್ಕೆ ಸೇರಿಸಲಾಗಿದೆ.

120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAhಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಕಂಪನಿ ಹೇಳಿರುವ ಪ್ರಕಾರ ಇದು ಶೇ. 1 ರಿಂದ ಶೇ. 100 ರಷ್ಟು ಚಾರ್ಜ್ ಕೇವಲ 25 ನಿಮಿಷಗಳಲ್ಲಿ ಆಗುತ್ತಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಸಪೋರ್ಟ್ ಮಾಡಲಿದೆ. ಉಳಿದಂತೆ 4G LTE, Wi-Fi 6, ಬ್ಲೂಟೂತ್ v5.2 ಮತ್ತು USB ಟೈಪ್-C ಪೋರ್ಟ್ ನೀಡಲಾಗಿದೆ. ಇದರಲ್ಲಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆಗಳನ್ನು ಅಳವಡಿಸಲಾಗಿದೆ.

ಹಿಂದಿನ ಲೇಖನಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ಆರೋಪಿಯ ಬಂಧನ
ಮುಂದಿನ ಲೇಖನರಾಜ್ಯಾದ್ಯಂತ ಇಂದಿನಿಂದ ನ್ಯಾಯಬೆಲೆ ಅಂಗಡಿಗಳು ಬಂದ್