ಬೆಂಗಳೂರು: 5ಕೆಜಿ ಹೆಚ್ಚುವರಿ ಅಕ್ಕಿಗೆ ಹಣ ನೀಡುವ ಬದಲು ಬೇಳೆ, ಎಣ್ಣೆ, ಬೆಲ್ಲ ವಿತರಿಸಿ ಎಂದು ರಾಜ್ಯ ಸರ್ಕಾರಕ್ಕೆ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದರು.
ವಿಧಾನಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ, ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ ಕೊರತೆ ಇದೆ. ಸಮಸ್ಯೆ ಬಗೆಹರಿಯುವವರೆಗೆ ಬೇಳೆ, ಎಣ್ಣೆ, ಬೆಲ್ಲ ವಿತರಿಸಬಹುದು ಎಂದು ಸಲಹೆ ನೀಡಿದರು.
ಹಾಗೆಯೇ 5 ಗ್ಯಾರಂಟಿ ಮೇಲೆ ಕಾಂಗ್ರೆಸ್ ಗೆದ್ದಿದೆಯೆಂದು ವಿಶ್ಲೇಷಣೆ ಮಾಡುತ್ತಾರೆ. ಆದರೆ, ಅದಕ್ಕೆ ನಾನು ಮಹತ್ವ ಕೊಡಲ್ಲ. ಯಾವ ನಿರೀಕ್ಷೆ ಇಟ್ಟುಕೊಂಡು ಜನ ಮತ ಕೊಟ್ಟಿದ್ದಾರೆ ಗೊತ್ತಾಗುತ್ತೆ ಎಂದು ತಿಳಿಸಿದರು.














