ಮನೆ ಕ್ರೀಡೆ ‘BAD’ ಸಿನಿಮಾದಲ್ಲಿ ನಟಿ ಮಾನ್ವಿತಾ ಕಾಮತ್

‘BAD’ ಸಿನಿಮಾದಲ್ಲಿ ನಟಿ ಮಾನ್ವಿತಾ ಕಾಮತ್

0

 ‘ಟಗರು’, ‘ಕೆಂಡಸಂಪಿಗೆ’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದ ನಟಿ ಮಾನ್ವಿತಾ ಕಾಮತ್ ಅವರು ‘BAD’ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

Join Our Whatsapp Group

ಈ ಚಿತ್ರಕ್ಕೆ ಪಿ.ಸಿ. ಶೇಖರ್​ ನಿರ್ದೇಶನ ಮಾಡುತ್ತಿದ್ದಾರೆ.  ನಕುಲ್ ಗೌಡ ಅವರು ಹೀರೋ ಆಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಮಾನ್ವಿತಾ ಕಾಮತ್​, ಅಪೂರ್ವ ಭಾರದ್ವಾಜ್, ಸಾಯಿ ಕೃಷ್ಣ, ಅಶ್ವಿನಿ, ಮಂಜುನಾಥ್ ಮುಂತಾದವರು ನಟಿಸುತ್ತಿದ್ದಾರೆ. ಎಸ್.ಆರ್. ವೆಂಕಟೇಶ್ ಗೌಡ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಪಿ.ಸಿ. ಶೇಖರ್ ಸಂಕಲನ, ಶಕ್ತಿ ಶೇಖರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಚಿನ್ ಬಿ. ಹೊಳಗುಂಡಿ ಸಂಭಾಷಣೆ ಅವರ ಬರೆದಿದ್ದು, ಜಿ. ರಾಜಶೇಖರ್ ಅವರು ಕಲಾ ನಿರ್ದೇಶನ ಮಾಡುತ್ತಿದ್ದಾರೆ.