ಮನೆ ಅಪರಾಧ ಮಂಡ್ಯ: ಮೂರುವರೆ ವರ್ಷದ ಮಗುವಿಗೆ ಆಟೋ ಚಾಲಕನಿಂದ ಲೈಂಗಿಕ ದೌರ್ಜನ್ಯ

ಮಂಡ್ಯ: ಮೂರುವರೆ ವರ್ಷದ ಮಗುವಿಗೆ ಆಟೋ ಚಾಲಕನಿಂದ ಲೈಂಗಿಕ ದೌರ್ಜನ್ಯ

0

ಮಂಡ್ಯ : ಮೂರುವರೆ ವರ್ಷದ ಮಗುವಿದೆ ಆಟೋ ಡ್ರೈವರ್ ಲೈಂಗಿಕ ದೌರ್ಜನ್ಯವೆಸಗಿದ ಪೈಶಾಚಿಕ ಕೃತ್ಯ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದ್ದು, ಕಾಮುಕ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಮಂಡ್ಯದ ಗಾಂಧಿನಗರದ ನಿವಾಸಿ ಸುಂದರ್ ಬಂಧಿತ ಆಟೋ ಚಾಲಕ.         

ಮಂಡ್ಯದ ಬಡಾವಣೆಯೊಂದರ ಮೂರುವರೆ ವರ್ಷದ ಹಸುಳೆಯನ್ನು ಪ್ರತಿದಿನ ಬೇಬಿ ಕೇರ್ ಗೆ ಬಿಟ್ಟು ವಾಪಸ್ ಕರೆ ತರಲು ಮಗುವಿನ ಪೋಷಕರು ಆಟೋ ಚಾಲಕ ಸುಂದರ್ ನನ್ನು ನೇಮಿಸಿಕೊಂಡಿದ್ದರು. ಜುಲೈ 19.ರಂದು ಬೆಳಗ್ಗೆ ಮಗುವನ್ನು ತನ್ನ ಆಟೋದಲ್ಲಿ ಕರೆದೊಯ್ದಿದ್ದ ಈತ, ಎಂದಿನಂತೆ ಸಂಜೆ 4:30ಕ್ಕೆ ಮನೆಗೆ ಕರೆತಂದು ಬಿಟ್ಟಿದ್ದ.   

ರಾತ್ರಿ 8:30ರ ವೇಳೆಯಲ್ಲಿ ಮಗು ನೋವಿನಿಂದ ನರಳುತ್ತಾ, ಆಟೋ ಚಾಲಕ ಎಸೆಗಿದ ಕೃತ್ಯವನ್ನು ತಾಯಿಗೆ ತಿಳಿಸಿದ್ದು, ತಕ್ಷಣವೇ ಅವರು ಮಂಡ್ಯ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಅದೇ ದಿನ ರಾತ್ರಿ 10:35ಕ್ಕೆ ಪಶ್ಚಿಮ ಠಾಣೆಯ ಇನ್ಸ್ಪೆಕ್ಟರ್ ಬಿ. ದೇವರಾಜು ಮತ್ತು  ಸಬ್ ಇನ್ಸ್ಪೆಕ್ಟರ್ ಎಸ್. ಪ್ರಭಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆಟೋ ಚಾಲಕನನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆತನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.