ಮನೆ ಸುದ್ದಿ ಜಾಲ ವಿಶೇಷ ಚೇತನರ ಆರೋಗ್ಯ ತಪಾಸಣೆ ಸಾಧನ ಸಲಕರಣೆ ಶಿಬಿರ ಆಯೋಜನೆಗೆ ಪೂರ್ವ ಸಿದ್ದತೆ ಕೈಗೊಳ್ಳಿ :...

ವಿಶೇಷ ಚೇತನರ ಆರೋಗ್ಯ ತಪಾಸಣೆ ಸಾಧನ ಸಲಕರಣೆ ಶಿಬಿರ ಆಯೋಜನೆಗೆ ಪೂರ್ವ ಸಿದ್ದತೆ ಕೈಗೊಳ್ಳಿ : ಡಾ ಬಗಾದಿ ಗೌತಮ್

0

 ಮೈಸೂರು (Mysuru)-ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಸಹಯೋಗದೊಂದಿಗೆ ವಿಶೇಷಚೇತನರ ಆರೋಗ್ಯ ತಪಾಸಣೆ ಹಾಗೂ ಸಾಧನ ಸಲಕರಣೆ ವಿತರಿಸುವ ಕಾರ್ಯಕ್ರಮ ಆಯೋಜನೆಗೆ ಪೂರ್ವ ಸಿದ್ದತೆ ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ (Dr. Bagadi Gautam) ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷಚೇತನರ ಆರೋಗ್ಯ ತಪಾಸಣೆ ಹಾಗೂ ಸಾಧನ ಸಲಕರಣೆ ವಿತರಣೆ ಕುರಿತ ಪೂರ್ವ ಸಿದ್ದತೆ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿರುವ ವಿಶೇಷಚೇತನರಿಗೆ ಆರೋಗ್ಯ ತಪಾಸಣೆ ಕೈಗೊಂಡು ಅವರಿಗೆ ಅಗತ್ಯವಿರುವ ಸಾಧನಾ ಸಲಕರಣೆಗಳನ್ನು ನೀಡುವ ಉದ್ದೇಶದಿಂದ ಶಿಬಿರಗಳನ್ನು ಆಯೋಜನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಲಿಮ್ಕೋ ಸಂಸ್ಥೆಯು ಜಿಲ್ಲೆಯಲ್ಲಿನ ವಿವಿಧ ಸ್ವರೂಪದ ಎಲ್ಲಾ ವಿಶೇಷಚೇತನರನರಿಗೆ ಅಂದರೆ ದೈಹಿಕ, ವಾಕ್ ಮತ್ತು ಶ್ರವಣ ನ್ಯೂನತೆ , ಬುದ್ದಿ ಮಾಂಧ್ಯ ಮತ್ತು ದೃಷ್ಠಿ ದೋಷವುಳ್ಳ ವಿಶೇಷ ಚೇತನರಿಗೆ ಪರೀಕ್ಷಿಸಿ ಅವರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಗುರುತಿಸಲಿದೆ. ಈ ಸಂಬAಧ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ಜಿಲ್ಲೆಯಲ್ಲಿನ ವಿಕಲಚೇತನರು ಇರುವ ಬಗ್ಗೆ ಹಾಗೂ ಜಿಲ್ಲೆಯಲ್ಲಿ ತಾಲೂಕುವಾರು ವಿಶೇಷಚೇತನರ ಪಟ್ಟಿ ಮಾಡಬೇಕು. ಯಾರಿಗೆ ಯಾವ ಬಗೆಯ ಸಾಧನ ಸಲಕರಣೆಗಳು ನೀಡಬೇಕಾಗುತ್ತದೆ ಎಂಬ ಬಗ್ಗೆ ಪೂರ್ವಭಾವಿಯಾಗಿ ಮಾಹಿತಿ ಸಂಗ್ರಹಣೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಮೇ 24 ರಂದು ನಂಜನಗೂಡು, 25 ರಂದು ಹೆಚ್.ಡಿ.ಕೋಟೆ, 26 ರಂದು ಟಿ.ನರಸಿಪುರ, 27 ರಂದು ಮೈಸೂರಿನಲ್ಲಿ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗುವುದು. ಶಿಬಿರ ಆಯೋಜನೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಅವರು ನಿರ್ದೇಶನ ನೀಡಿದರು.

ಆರೋಗ್ಯ ಇಲಾಖೆ, ಅಂಗವಿಕಲರ ಕಲ್ಯಾಣ ಇಲಾಖೆಗಳು ವಿಶೇಷ ಗಮನ ನೀಡಿ ಅರ್ಹರಿಗೆ ನೆರವಾಗಿ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಇದಕ್ಕಾಗಿ ಅಗತ್ಯ ಸಿದ್ದತೆ ನಡೆಸಬೇಕು. ಕಾರ್ಯಕ್ರಮದ ರೂಪುರೇಷೆ ತಯಾರಿಸಿ ಸೂಕ್ತ ಯೋಜನೆ ಹಾಕಿಕೊಂಡು ಶಿಬಿರ ಏರ್ಪಾಡು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಪ್ರೇಮ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಾಲಿನಿ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಅಧಿಕಾರಿಗಳು ಹಾಗೂ ಇತರರು ಸಭೆಯಲ್ಲಿ ಹಾಜರಿದ್ದರು.

ಹಿಂದಿನ ಲೇಖನಅಪಘಾತ: ಇಬ್ಬರ ಸಾವು; ಇಬ್ಬರ ಸ್ಥಿತಿ ಗಂಭೀರ
ಮುಂದಿನ ಲೇಖನಜೂನ್ 4 ರಂದು ರಾಜ್ಯ ಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ