ಮನೆ ಮನರಂಜನೆ ಹೊಸ ಪ್ರತಿಭೆಗಳ ‘ರಕ್ತಾಕ್ಷ’ ಟೀಸರ್ ರಿಲೀಸ್

ಹೊಸ ಪ್ರತಿಭೆಗಳ ‘ರಕ್ತಾಕ್ಷ’ ಟೀಸರ್ ರಿಲೀಸ್

0

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ರಕ್ತಾಕ್ಷ’ ಸಿನಿಮಾದ ಮಾಸ್‌ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಇನ್ನು “ರಕ್ತಾಕ್ಷ’ ಸಿನಿಮಾದ ಟೀಸರ್‌ ನಲ್ಲಿ ಯುವ ನಾಯಕನಟ ರೋಹಿತ್‌ ಪಂಚಿಂಗ್‌ ಡೈಲಾಗ್‌ ಹೊಡೆಯುತ್ತಾ ಖಡಕ್‌ ಎಂಟ್ರಿ ಕೊಟ್ಟಿದ್ದಾರೆ. ಸಿಕ್ಸ್‌ ಪ್ಯಾಕ್‌ ಲುಕ್‌ ನಲ್ಲಿ ರಗಡ್‌ ಆಗಿ ಅಬ್ಬರಿಸಿರುವ ರೋಹಿತ್‌ ಅವರು ಪ್ರಮೋದ್‌ ಶೆಟ್ಟಿ ಎದುರು ತೊಡೆ ತಟ್ಟಿ ಅಬ್ಬರಿಸಿದ್ದಾರೆ.

Join Our Whatsapp Group

ಮಾಡೆಲಿಂಗ್‌ ಲೋಕದಲ್ಲಿ ಛಾಪು ಮೂಡಿಸಿರುವ ರೋಹಿತ್‌ “ರಕ್ತಾಕ್ಷ’ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ ವುಡ್‌ ಗೆ ಪರಿಚಯವಾಗುತ್ತಿದ್ದಾರೆ. “ಸಾಯಿ ಪ್ರೊಡಕ್ಷನ್‌ ಹೌಸ್‌’ ಬ್ಯಾನರ್‌ ನಡಿ ನಿರ್ಮಾಣವಾಗಿರುವ “ರಕ್ತಾಕ್ಷ’ ಸಿನಿಮಾಕ್ಕೆ ವಾಸುದೇವ ಎಸ್‌. ಎನ್‌ ನಿರ್ದೇಶನ ಮಾಡುತ್ತಿದ್ದಾರೆ.

 “ಕೆಜಿಎಫ್’ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರಥ್‌, ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ ನಾಗರಾಜ, ಬಸವರಾಜ ಆದಾಪುರ “ರಕ್ತಾಕ್ಷ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಟ ಪ್ರಮೋದಶೆಟ್ಟಿ ಸಿನಿಮಾದಲ್ಲಿ ಖಳನಾಯಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ರಕ್ತಾಕ್ಷ’ ಸಿನಿಮಾಕ್ಕೆ ಸುಜಿತ್‌ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್‌ ಸಂಗೀತ ಸಂಯೋಜಿಸಿದ್ದಾರೆ.

ಈಗಾಗಲೇ “ರಕ್ತಾಕ್ಷ’ ಸಿನಿಮಾದಲ್ಲಿ ವಸಿಷ್ಠ ಸಿಂಹ ಹಾಡಿರುವ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದ್ದು, ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ

ಖುಷಿಯಲ್ಲಿರುವ ಚಿತ್ರತಂಡ, ಇದೀಗ ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದೆ. ಸದ್ಯ “ರಕ್ತಾಕ್ಷ’ ಸಿನಿಮಾದ ಟೀಸರ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.